ತಾಳ್ಮೆಯಿಂದ ಮಕ್ಕಳ ಕಾಳಜಿ ವಹಿಸಿ

19-msk-1
ಮಸ್ಕಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿಶು ಪಾಲಕಿಯರ ತರಬೇತಿ ಕಾರ್ಯಗಾರಕ್ಕೆ ಗ್ರಾಮೀಣ ಉದ್ಯೋಗದ ತಾ.ಪಂ.ಸಹಾಯಕ ನಿರ್ದೆಶಕ ಶಿವಾಣಂದರಡ್ಡಿ ಚಾಲನೆ ನೀಡಿದರು. ಟ್ರೇನ್‌ರಗಳಾದ ಸುನೀತಾ, ರಾಜೇಶ್ವರಿ, ತಾ.ಪಂ.ಸಿಬ್ಬಂದಿ ಬಸವರಾಜ, ಸತೀಶ ಇತರರಿದ್ದರು.
Published on

ಮಸ್ಕಿ: ನರೇಗಾ ಯೋಜನೆ ಮಹಿಳಾ ಕೂಲಿಕಾರರ ಮಕ್ಕಳ ಆರೈಕೆಗೆ ಆರಂಭಿಸುತ್ತಿರುವ ಶಿಶು ಪಾಲನ ಕೇಂದ್ರಗಳ ನಿರ್ವಹಣೆಯನ್ನು ಶಿಶು ಪಾಲಕಿಯರು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಗ್ರಾಮೀಣ ಉದ್ಯೋಗದ ತಾ.ಪಂ.ಸಹಾಯಕ ನಿರ್ದೆಶಕ ಶಿವಾಣಂದರಡ್ಡಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿರುವ ಶಿಶು ಪಾಲಕಿಯರ ತರಬೇತಿ ಕಾರ್ಯಗಾರದಲ್ಲಿ ಗುರುವಾರ ಮಾತನಾಡಿದರು.

ತರಬೇತಿ ಕಾರ್ಯಗಾರಕ್ಕೆ ಚಾಲನೆ

ಮಕ್ಕಳ ಆರೈಕೆಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅನಿವಾರ್ಯವಾಗಿ ಮಹಿಳೆಯರು ಉದ್ಯೋಗ ಖಾತ್ರಿ ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆತರುತ್ತಾರೆ.

ಇದನ್ನು ತಪ್ಪಿಸಲು, ಮಕ್ಕಳಿಗೆ ಸೂಕ್ತ ರಕ್ಷಣೆ ಜತೆಗೆ ಪೌಷ್ಟಿಕ ಆಹಾರ ಒದಗಿಸಲು ಪ್ರತಿ ಗ್ರಾಪಂಯಲ್ಲಿ ಶಿಶು ಪಾಲನ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಶಿಶು ಪಾಲಕಿಯರು ತಾಳ್ಮೆ ಕಳೆದುಕೊಳ್ಳದೇ ಮಕ್ಕಳ ಕಾಳಜಿ ವಹಿಸಬೇಕು. ಕೇಂದ್ರಕ್ಕೆ ಅಗತ್ಯ ಇರುವ ಪರಿಕರಗಳ ಖರೀದಿಗೆ ಕ್ರಮ ವಹಿಸಲಾಗುವುದು ಎಂದರು.

ಟ್ರೇನ್‌ರಗಳಾದ ಸುನೀತಾ, ರಾಜೇಶ್ವರಿ, ತಾ.ಪಂ.ಸಿಬ್ಬಂದಿ ಬಸವರಾಜ, ಸತೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net