More

    ಅವಿವಾಹಿತ ಹೆಣ್ಣು ಮಕ್ಕಳಿಗೆ ಜೀವನಾಂಶದ ಹಕ್ಕು; ಜಾತಿ, ವಯಸ್ಸಿನ ನಿರ್ಬಂಧ ಇಲ್ಲ

    ಪ್ರಯಾಗ್​ರಾಜ್: ವಿವಾಹವಾಗದ ಮಗಳು ಯಾವುದೇ ಧರ್ಮ ಅಥವಾ ವಯಸ್ಸಿನವಳಾಗಿದ್ದರೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪೋಷಕರಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

    ನೈಮುಲ್ಲಾ ಶೇಖ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ. ಮೂವರು ಹೆಣ್ಣುಮಕ್ಕಳಿಗೆ ಪೋಷಕರು ಜೀವನಾಂಶವನ್ನು ನೀಡುವಂತೆ ಕೆಳ ನ್ಯಾಯಾಲಯದ ಕೋರ್ಟ್ ನೀಡಿದ್ದ ಆದೇಶವನ್ನು ನೈಮುಲ್ಲಾ ಶೇಖ್ ಪ್ರಶ್ನಿಸಿದ್ದರು. ಅವಿವಾಹಿತ ಮಗಳು ಹಿಂದೂ ಅಥವಾ ಮುಸ್ಲಿಂ ಆಗಿರಲಿ, ಆಕೆಯ ಯಾವುದೇ ವಯಸ್ಸಿನಲ್ಲಿದ್ದರೂ ಜೀವನಾಂಶವನ್ನು ಪಡೆ ಯುವ ಹಕ್ಕಿದೆ. ಸಮಸ್ಯೆ ಕೇವಲ ಜೀವನ ನಿರ್ವಹಣೆಗೆ ಸಂಬಂಧಿಸಿದ್ದಲ್ಲಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರ ಅಡಿ ನೊಂದವರಿಗೆ ಹಕ್ಕುಗಳು ಲಭ್ಯವಿದೆ ಎಂದು ನ್ಯಾ. ಜ್ಯೋತ್ಸಾ್ನ ಶರ್ಮಾ ಹೇಳಿದರು.

    ತಂದೆ ಮತ್ತು ಮಲತಾಯಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಮೂವರು ಹೆಣ್ಣು ಮಕ್ಕಳು ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಮಧ್ಯಂತರ ಜೀವನಾಂಶ ನೀಡಲು ಆದೇಶಿಸಿತ್ತು. ಆದರೆ ಈ ಹೆಣ್ಣುಮಕ್ಕಳು ವಯಸ್ಕರು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ ಎಂಬ ಕಾರಣಕ್ಕೆ ಜೀವನಾಂಶ ನೀಡುವ ವಿರುದ್ಧ ಪೋಷಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ಭದ್ರತಾ ಉಲ್ಲಂಘನೆ ಆರೋಪಿಗೆ ಜಾಮೀನಿಲ್ಲ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತ ನೀಲಂ ಆಜಾದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ತನಿಖೆಯು ಆರಂಭಿಕ ಹಂತದಲ್ಲಿದೆ. ಆರೋಪಿಯು ಭಾರತ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನು ನೀಡುವುದು ಸೂಕ್ತವಲ್ಲ ಎಂದು ಹೇಳಿದರು. ಪ್ರಕರಣದಲ್ಲಿ ಆರೋಪಿಗಳಾದ ಆಜಾದ್, ಕರ್ನಾಟಕದ ಮನೋರಂಜನ್, ಸಾಗರ್ ಶರ್ವ, ಲಲಿತ್ ಝಾ, ಅಮೋಲ್ ಶಿಂಧೆ ಮತ್ತು ಮಹೇಶ್ ಕುಮಾವತ್ ಇನ್ನಿತರರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

    ಇನ್ನಷ್ಟು ಕಾಲಾವಕಾಶ ಕೋರಿಕೆ: 2002ರ ಕೋಮುಗಲಭೆಯಲ್ಲಿ ಬಿಲ್ಕಿಸ್ ಬಾನೋ ಎಂಬಾಕೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಆಕೆಯ ಕುಟುಂಬದ 7 ಮಂದಿಯನ್ನು ಕಗ್ಗೊಲೆಗೈದ ಪ್ರಕರಣದ ಐವರು ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ವಿನಾಯಿತಿಯನ್ನು ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ರದ್ದುಗೊಳಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಆ ಐವರು ಅಪರಾಧಿಗಳು ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಗುರುವಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. 2022ರ ಸ್ವಾತಂತ್ರೊ್ಯೕತ್ಸವದ ಸಂದರ್ಭದಲ್ಲಿ ಅಕಾಲಿಕವಾಗಿ ಬಿಡುಗಡೆ ಆಗಿದ್ದ ಅಪರಾಧಿಗಳು 2 ವಾರಗಳ ಒಳಗೆ ಜೈಲಿಗೆ ಮರಳುವಂತೆಯೂ ಸುಪ್ರೀಂಕೋರ್ಟ್ ತಿಳಿಸಿತ್ತು. ಆದರೆ, ಅನಾರೋಗ್ಯ, ಶಸ್ತ್ರಚಿಕಿತ್ಸೆ, ಮಗನ ಮದುವೆ, ಬೆಳೆಕೊಯ್ಲು ಮುಂತಾದ ಕಾರಣಗಳನ್ನು ಹೇಳಿ ಇವರು ಕಾಲಾವಕಾಶ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts