238ನೇ ಘಟಕದ ಪಾಸಿಂಗ್ ಔಟ್ ಪರೇಡ್

New Project (19)
Published on

ಕಾಸರಗೋಡು: ನಗರದ ಸರ್ಕಾರಿ ಹೈಯರ್ ಸೆಕೆಂಡರಿಯಿಂದ 2 ವರ್ಷಗಳ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿ ಪೊಲೀಸ್ ಕ್ಯಾಡೆಟ್(ಎಸ್‌ಪಿಸಿ) 238ನೇ ಘಟಕದ ಪಾಸಿಂಗ್ ಔಟ್ ಪರೇಡ್ ಶಾಲಾ ಮೈದಾನದಲ್ಲಿ ನಡೆಯಿತು.ಕಾಸರಗೋಡು ಹೆಚ್ಚುವರಿ ಎಸ್ಪಿ ಡಾ.ಬಾಲಕೃಷ್ಣನ್ ನಾಯರ್ ಗೌರವ ವಂದನೆ ಸ್ವೀಕರಿಸಿದರು.

ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಭಾಗವಹಿಸಿದ್ದರು. ನಗರಸಭಾ ಶಿಕ್ಷಣ, ಕಲೆ, ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷೆ ರಜಿನಿ ಪ್ರಭಾಕರ, ನಗರಸಭಾ ಸದಸ್ಯೆ ರಂಜಿತಾ, ಎಸ್‌ಎಚ್‌ಒ ನಳಿನಾಕ್ಷನ್, ಮುಖ್ಯಶಿಕ್ಷಕಿ ಎ.ಉಷಾ, ಹೆಚ್ಚುವರಿ ಎಸ್‌ಪಿಸಿ ಅಧಿಕಾರಿ ಟಿ.ತಂಬಾನ್, ಪಿಟಿಎ ಅಧ್ಯಕ್ಷ ಅಬೂಬಕರ್ ತುರುತ್ತಿ, ಪ್ರಭಾರ ಪ್ರಾಂಶುಪಾಲ ವಿನೋದ್ ಕುಮಾರ್, ಎಸ್‌ಪಿಸಿ ತರಬೇತುದಾರರಾದ ಸಿಪಿಒ ಕೆ.ವಿ. ರಾಜೇಶ್, ಸೌಮ್ಯಾ, ಎಸ್‌ಐಪಿ ಬಿಜು ಮೋನ್, ಎಎಸ್‌ಐ ಕೆ.ಶ್ರೀನಿವಾಸನ್, ಪಿ.ಜೆ.ಜೋಸೆಫ್, ಸಿಪಿಒ ಡಾ.ಪಿ.ಸಂಧ್ಯಾಕುಮಾರಿ, ಟಿ.ಮಧು ಪ್ರಶಾಂತ್, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net