ಕ್ರೀಡೆಯಿಂದ ಶಾರೀರಿಕ, ಮಾನಸಿಕ ನೆಮ್ಮದಿ : ಶಶಿಧರ್ ಎಸ್. ಬಣ್ಣನೆ

New Project (18)
Published on

ಪುತ್ತೂರು ಗ್ರಾಮಾಂತರ: ಕ್ರೀಡೆ ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯೊಂದಿಗೆ ಆರೋಗ್ಯವನ್ನು ನೀಡುತ್ತದೆ. ಜೀವನದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಎಸ್. ಹೇಳಿದರು.

ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಶಾಲಾ ವಠಾರದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯ ಅಜ್ಜಿಕಲ್ಲು ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಕುಸಾಲ್ದ ಗೊಬ್ಬುಲು’ ಕ್ರೀಡಾ ಸಂಭ್ರಮ ಸಮಾರೋಪದಲ್ಲಿ ಮಾತನಾಡಿದರು.

ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಮಾತನಾಡಿದರು. ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ ಅಜ್ಜಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ರೈ ಮೊಡಪ್ಪಾಡಿ, ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸಿಶೇ ಕಜೆಮಾರ್, ಅಜ್ಜಿಕಲ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ನಾಯ್ಕ ಮಾತನಾಡಿದರು.

ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹಾನ್ ಗೌಡ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್, ಮುಂಡೋವುಮೂಲೆ ಭಜನಾ ಮಂದಿರದ ಅರ್ಚಕ ಮೋಹನ್, ಒಕ್ಕೂಟದ ಮಾಜಿ ಅಧ್ಯಕ್ಷ ವಾಸು ನಾಯ್ಕ, ಒಕ್ಕೂಟದ ಉಪಾಧ್ಯಕ್ಷ ಮೋಹನ್‌ಚಂದ್ರ, ಕಾರ್ಯದರ್ಶಿ ಶಿಲ್ಪಾ ಮಹೇಶ್ ರೈ, ಜತೆ ಕಾರ್ಯದರ್ಶಿ ಉಷಾ, ಸ್ಥಳೀಯರಾದ ಈಶ್ವರ ನಾಯ್ಕ ಅಜ್ಜಿಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಆನಂದ ಕಲೆಂಜಿಲಾ ನಿರೂಪಿಸಿದರು. ಸುಶಾಂತ್ ಅಜ್ಜಿಕಲ್ಲು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net