ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ

Namma Metro
ಸಾಂದರ್ಭ
Published on

ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದ್ದು, ಹೆಚ್ಚುವರಿ ಮೆಟ್ರೋ ರೈಲು ಸೇವೆ ಆರಂಭವಾದರೂ ತ್ವರಿತ ಪ್ರಯಾಣ ಸಾಧ್ಯವಾಗುತ್ತಿಲ್ಲ. ರೈಲಿಗಾಗಿ ಕಾಯಬೇಕಾದ ಸ್ಥಿತಿ ಉಂಟಾಗುತ್ತಿದೆ ಎಂದು ಸಂಸದ ಪಿ.ಸಿ. ಮೋಹನ್​ ​'ಎಕ್ಸ್​' ಜಾಲತಾಣದಲ್ಲಿ ೋಟೋ ಸಮೇತ ಬೇಸರ ವ್ಯಕ್ತಪಡಿಸಿದ್ದಾರೆ.

ಮೆಜೆಸ್ಟಿಕ್​ ನಿಲ್ದಾಣದಿಂದ ಈಗಾಗಲೇ ಹೆಚ್ಚುವರಿ ರೈಲು ಸೇವೆ ಆರಂಭಿಸಿದ್ದರೂ ಗರುಡಾಚಾರ್​ಪಾಳ್ಯದಲ್ಲಿ ಜನದಟ್ಟಣೆ ಕಂಡುಬಂದಿದೆ. ಸಮಸ್ಯೆಯ ಸುಲಲಿತ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಕೂಡಲೇ ಈ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಳೆ ಕಾರಣ

ನೇರಳೆ ಮಾರ್ಗ ನಗರದ ಐಟಿ ಕಾರಿಡಾರ್​ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ತಂದಿದೆ. ಹೀಗಾಗಿ ಈ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲುಗಳು ಬಹುತೇಕ ಸಂದರ್ಭದಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಕೆಲ ದಿನಗಳಿಂದ ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಮಳೆಯಾಗುತ್ತಿದ್ದು, ಟ್ರಾಫಿಕ್​ ಜಾಮ್​ ಸಾಮಾನ್ಯ ಎಂಬಂತಾಗಿದೆ. ಅದಕ್ಕೆ ಸಿಲುಕದಿರಲು ಜನರು ನಮ್ಮ ಮೆಟ್ರೋ ಮೊರೆ ಹೋಗುತ್ತಿದ್ದಾರೆ.

ಹೆಚ್ಚುವರಿ ಸೇವೆ ಬಳಿಕವೂ ಸಮಸ್ಯೆ

ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿಸಲು ಬಿಎಂಆರ್​ಸಿಎಲ್​ 6ರಿಂದ ಇಂಟರ್​ಚೆಂಜ್​ ನಿಲ್ದಾಣವಾದ ಮೆಜೆಸ್ಟಿಕ್​ನಿಂದ ಹೆಚ್ಚುವರಿಯಾಗಿ 15 ರೈಲು ಸೇವೆ ಆರಂಭಿಸಿದೆ. ಹೆಚ್ಚುವರಿ ರೈಲುಗಳು ಪ್ರತಿ 3.5 ನಿಮಿಷಗಳಿಗೊಮ್ಮೆ ಸಂಚರಿಸುತ್ತಿವೆ. ಹೀಗಿದ್ದರೂ ಬೆಳಗ್ಗೆ ಹಾಗೂ ಸಂಜೆಯ ಪೀಕ್​ ಅವರ್​ನಲ್ಲಿ ಪ್ರಯಾಣಿಕರಿಗೆ ರೈಲು ಹತ್ತಲು ಸಾಧ್ಯವಾಗದಷ್ಟು ದಟ್ಟಣೆ ಉಂಟಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net