ಗೋಪೂಜೆಯಲ್ಲಿ ಭಾಗವಹಿಸುವುದು ಸೌಭಾಗ್ಯ

kota (1)
Published on

ಕೋಟ: ಗೋಪೂಜೆಯ ಮಹತ್ವ ಅರಿತು ಅದರ ಕೈಂಕರ್ಯದಲ್ಲಿ ಭಾಗಿಯಾಗುವುದೇ ಸೌಭಾಗ್ಯ ಎಂದು ಪತ್ರಕರ್ತ ಚಂದ್ರಶೇಖರ ಬೀಜಾಡಿ ಹೇಳಿದರು.

ಬೀಜಾಡಿಯ ಕಪಿಲೆ ಗೋ ಶಾಲೆಯಲ್ಲಿ ಪಂಚವರ್ಣ ಯುವಕ, ಮಹಿಳಾ ಮಂಡಲ ನೇತೃತ್ವದಲ್ಲಿ ಕೋಟೇಶ್ವರ ಮೊಗವೀರ ಯುವ ಸಂಟನೆ ಮತ್ತು ಮಹಿಳಾ ಟಕ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಸಾಮೂಹಿಕ ಗೋಪೂಜೆಯಲ್ಲಿ ಮಾತನಾಡಿದರು.

ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ ಉದ್ಘಾಟಿಸಿದರು. ಮೊಗವೀರ ಯುವ ಸಂಟನೆ ಅಧ್ಯಕ್ಷ ರಾವೇಂದ್ರ ಹರಪ್ಪನಕೆರೆ ಹಾಗೂ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಗೋಗ್ರಾಸ ನೀಡಿದರು. ಪಂಚವರ್ಣ ಮಹಿಳಾ ಮಂಡಲ ಹಾಗೂ ಮೊಗವೀರ ಮಹಿಳಾ ಟಕದ ಮಹಿಳೆಯರು ಗೋವಿಗೆ ವಿಶೇಷವಾಗಿ ಸಾಂಪ್ರದಾಯಿಕ ಆಹಾರ ನೀಡಿದರು.

ಕಪಿಲೆ ಗೋ ಶಾಲೆ ಮುಖ್ಯಸ್ಥ ಕುವಾರ್, ಮೊಗವೀರ ಯುವ ಸಂಟನೆ ಜಿಲ್ಲಾ ಉಪಾಧ್ಯಕ್ಷ ಅಶೋಕ್ ತೆಕಟ್ಟೆ, ಕೋಟೇಶ್ವರ ಟಕ ಗೌರವಾಧ್ಯಕ್ಷ ಆನಂದ್ ಕುಂದರ್, ವಾಜಿ ಅಧ್ಯಕ್ಷ ಸುನಿಲ್ ನಾಯ್ಕ, ನಾಗರಾಜ್ ಬೀಜಾಡಿ, ಗುರಿಕಾರರಾದ ರಾಮಣ್ಣ, ಪಂಚವರ್ಣ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ರಾಷ್ಟ್ರೀಯ ವಾನವ ಹಕ್ಕು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ ಉಪಸ್ಥಿತರಿದ್ದರು. ಕಲಾವತಿ ಅಶೋಕ್ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು. ಸುಜಾತಾ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net