ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿ

IMG-20250213-WA0112(1)
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿರುವ ಹುಣಸೂರಿನ ಯುವ ಉದ್ಯಮಿಗಳಾದ ಎಚ್.ಎ.ಪವನ್ ತಪಸ್ವಿ ಹಾಗೂ ನಿಖಿಲ್.
Published on

ಹನಗೋಡು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹುಣಸೂರಿನ ಯುವ ಉದ್ಯಮಿ ಎಚ್.ಎಂ.ಪವನ್ ತಪಸ್ವಿ ಹಾಗೂ ಹನಗೋಡಿನ ನಿಖಿಲ್ ಭಾಗವಹಿಸಿದ್ದಾರೆ.

ಯುವ ಉದ್ಯಮಿ ಎಚ್.ಎಂ.ಪವನ್ ತಪಸ್ವಿ ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಪುತ್ರರಾಗಿದ್ದು ಇವರು ಕ್ಲೀನ್ ಎನರ್ಜಿ ಹಾಗೂ ಹೈಬ್ರಿಡ್ ಸೋಲಾರ್ ಎನರ್ಜಿ ಉದ್ಯಮ ಕ್ಷೇತ್ರದಲ್ಲಿದ್ದಾರೆ. ನಿಖಿಲ್ ಅವರು ಹನಗೋಡಿನ ಪ್ರೌಢಶಾಲಾ ಶಿಕ್ಷಕಿ ಛಾಯಾ ಸುನಿಲ್ ಅವರ ಪುತ್ರರಾಗಿದ್ದು ಇ-ವೆಹಿಕಲ್(ಎಲೆಕ್ಟ್ರಿಕ್ ವಾಹನ) ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net