ಒತ್ತುವರಿ ತೆರವು ವೇಳೆ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ, ದೊಡ್ಡ ಅಂಗಡಿಯವರಿಗೆ ವಿನಾಯಿತಿ!?

Encroachment 2
Published on

ಆನೇಕಲ್: ಪಂಚಾಯಿತಿ ಅಧಿಕಾರಿಗಳು ಒತ್ತುವರಿ ತೆರವು ವೇಳೆ ಪಕ್ಷಪಾತ ಧೋರಣೆ ತೋರಿದ್ದು, ಬಡವರಿಗೆ ಅನ್ಯಾಯ, ಉಳ್ಳವರಿಗೆ ಅನುಕೂಲ ಎಂಬಂತಾಗಿದೆ. ಇಂಥದ್ದೊಂದು ಬೆಳವಣಿಗೆ ಬೆಂಗಳೂರಿನ ಆನೇಕಲ್​ನ ದೊಡ್ಡ ತೋಗೂರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಪಂಚಾಯತ್ ಅಧಿಕಾರಿಗಳು ಇಂದು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಿದರು. ಆದರೆ ಈ ಕಾರ್ಯಾಚರಣೆ ವೇಳೆ ಪಕ್ಷಪಾತ ಧೋರಣೆ ತೋರಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಬಡವರ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿ, ಇನ್ನು ಕೆಲವನ್ನು ಹಾಗೇ ಬಿಟ್ಟು ಹೋದ ಪಂಚಾಯತಿ ಅಧಿಕಾರಿಗಳು, ದೊಡ್ಡ ದೊಡ್ಡ ಅಂಗಡಿಗಳವರಿಗೆ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯನಾ? ಅಧಿಕಾರಿಗಳು ಶ್ರೀಮಂತರ ಕೈಗೊಂಬೆಗಳಾಗಿದ್ದಾರಾ? ಎಂದು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net