ಬೆಂ-ಮೈಸೂರು ಹೆದ್ದಾರಿಯಲ್ಲೇ ಪಾರ್ಕಿಂಗ್​

parking
Published on

ಬೃಹತ್​ ಲಾರಿ, ಕಂಟೇನರ್​ ನಿಲುಗಡೆಯಿಂದ ಇತರ ವಾಹನ ಸಂಚಾರಕ್ಕೆ ಕಿರಿಕಿರಿ

ಬಿಡದಿ: ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್​ ಮಾಡುತ್ತಿರುವ ಕಾರಣ ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದ್ದು, ಅಪಘಾತಕ್ಕೂ ಆಸ್ಪದ ನೀಡಿದೆ.

ಹೌದು..! ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ.

ಆದರೆ ಈ ಲಾರಿ ಹಾಗೂ ಬೃಹತ್​ ಟ್ರಕ್​ಗಳನ್ನು ಹನುಮಂತನಗರದಿಂದ ಬೈರಮಂಗಲ ಕ್ರಾಸ್​ವರೆಗಿನ ಹೆದ್ದಾರಿಯಲ್ಲೇ ಅನಧಿಕೃತವಾಗಿ ಪಾರ್ಕಿಂಗ್​ಮಾಡುತ್ತಿದ್ದು, ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಇನ್ನು ಬೆಂ.&ಮೈ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕೆಲ ಪ್ರತಿಷ್ಠಿತ ಕಾರ್ಖಾನೆಗಳಿದ್ದು, ಇಲ್ಲಿಗೆ ನೂರಾರು ಲಾರಿ, ಟ್ರಕ್​ಗಳು ಬಂದು ಹೋಗುತ್ತವೆ. ದೊಡ್ಡ ಕಂಟೇನರ್​ಗಳು ಹೆದ್ದಾರಿಯಲ್ಲಿ ನಿಲ್ಲುವುದರಿಂದ ಸಮಸ್ಯೆ ದುಪ್ಪಟ್ಟಾಗಿದೆ.

ತಿರುವು ಪಡೆಯುವಾಗ ಸಂಚಾರ ಸಿಕ್ಕುಬೃಹತ್​ ಕಂಟೇನರ್​ ಹಾಗೂ ಟ್ರಕ್​ಗಳು ಬೇರೆ ಕಡೆಯಿಂದ ಬಂದು ಹಾಗೂ ಇಲ್ಲಿಂದ ಹೊರಡುವಾಗ ಹೆದ್ದಾರಿಯಲ್ಲಿ ಸಂಚಾರ ಸಿಕ್ಕು ಉಂಟಾಗುತ್ತಿದೆ. ಕೆಲವೊಮ್ಮೆ ಕಂಟೇನರ್​ಗಳು ಹೆದ್ದಾರಿಯಿಂದ ತಿರುವು ಪಡೆಯಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಇದರ ಹಿಂದೆಯೇ ಮತ್ತೊಂದು, ಮಗದೊಂದು ಲಾರಿಗಳು ಬಂದು ನಿಂತುಕೊಳ್ಳುತ್ತವೆ. ಪರಿಣಾಮ ಹೆದ್ದಾರಿಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ.ಸಾವು&ನೋವು ವರದಿಹೆದ್ದಾರಿ ಪಕ್ಕದ ಗ್ಯಾರೇಜ್​ನವರು ರಸ್ತೆಯಲ್ಲೆ ವಾಹನ ನಿಲ್ಲಿಸಿ, ದುರಸ್ತಿ ಮಾಡುವುದು, ಇನ್ನು ಲಾರಿ ಚಾಲಕರು ಊಟ, ತಿಂಡಿಗೆ ರಸ್ತೆ ಪಕ್ಕದಲ್ಲೇ ವಾಹನಗಳನ್ನು ಪಾರ್ಕ್​ ಮಾಡಿ ಹೋಗುತ್ತಾರೆ. ಪರಿಣಾಮ ಹೈವೇಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಅದರಲ್ಲೂ ರಾತ್ರಿ ವೇಳೆ ಅಪಘಾತ ಪ್ರಮಾಣ, ಪರಿಣಾಮ ಹೆಚ್ಚಿದ್ದು, ಸಾವು&ನೋವುಗಳು ವರದಿಯಾಗುತ್ತಲೇ ಇವೆ.ಇಲಾಖೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ!ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂನೆಗೆ ಕಡಿವಾಣ ಹಾಕುವುದು ಪೊಲೀಸ್​, ಆರ್​ಟಿಒ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಣೆ. ಪೊಲೀಸ್​ ಇಲಾಖೆ ಹೈವೇ ಪೆಟ್ರೊಲಿಂಗ್​ (ಹೆದ್ದಾರಿ ಗಸ್ತು) ಎಂಬ ಪ್ರತ್ಯೇಕ ವಾಹನ ಹೊಂದಿದ್ದು, ಇದಕ್ಕೆ ಅಗತ್ಯ ಸಿಬ್ಬಂದಿಯೂ ಇದ್ದಾರೆ. ಇನ್ನು ಆರ್​ಟಿಒ ಇಲಾಖೆಯೂ ಸಹ ರಸ್ತೆ ನಿಯಮ ಉಲ್ಲಂನೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ನಿಯಮ ಉಲ್ಲಂಸಿ ಪಾರ್ಕ್​ ಮಾಡಿದರೆ ಅಂತಹ ವಾಹನಗಳನ್ನು ಜಪ್ತಿಪಡಿಸಿಕೊಳ್ಳುವ ಅಧಿಕಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ನೀಡಲಾಗಿದೆ. ಆದರೂ ಮೂರೂ ಇಲಾಖೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿವೆ.

ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತೆ. ಈಗಿರುವ ಬಿಡದಿ ವ್ಯಾಪ್ತಿಯ ಕಾಡುಮನೆ ಕ್ರಾಸ್​ನಿಂದ ಬೈರಮಂಗಲ ಕ್ರಾಸ್​ವರೆಗೆ ಎರಡೂ ಬದಿಗಳಲ್ಲಿ ಬೇಕಾಬಿಟ್ಟಿಯಾಗಿ ದೊಡ್ಡದೊಡ್ಡ ಕಂಟೇನರ್​, ಟ್ರಕ್​ಗಳನ್ನು ಚಾಲಕರು ನಿಲ್ಲಿಸುತ್ತಿದ್ದಾರೆ. ಇದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. > ಸುರೇಶ್​ ವಾಹನ ಸವಾರ, ಕೆಂಚನಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net