24ರಂದು ಪಟ್ಟಣದಲ್ಲಿ ವಾಹನ ನಿಲುಗಡೆ ನಿಷೇಧ

24ರಂದು ಪಟ್ಟಣದಲ್ಲಿ ವಾಹನ ನಿಲುಗಡೆ ನಿಷೇಧ
Published on

ನಾಪೋಕ್ಲು: ಎಮ್ಮೆಮಾಡು ಮಖಾಂ ಉರುಸ್ ಹಿನ್ನೆಲೆ ಪಟ್ಟಣದ ಮುಖ್ಯರಸ್ತೆಯಲ್ಲಿ ಫೆ.24ರಂದು ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಸಾರ್ವಜನಿಕ ಸಮ್ಮೇಳನಕ್ಕೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುವ ಸಾಧ್ಯತೆ ಇರುವುದರಿಂದ ಹಾಗೂ ನಾಪೋಕ್ಲುವಿನಲ್ಲಿ ಸಂತೆ ಇರುವುದರಿಂದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ಸಾರ್ವಜನಿಕರು ಸಹಕರಿಸಬೇಕು ಎಂದು ಠಾಣಾಧಿಕಾರಿ ಮಂಜುನಾಥ್ ಕೋರಿದ್ದಾರೆ.

ಎಮ್ಮೆಮಾಡು ಮಖಾಂ ಉರುಸ್‌ಗೆ ಭಾಗವಹಿಸಲು ಬರುವವರು ಹಾಗೂ ಸಾರ್ವಜನಿಕರು ವಾಹನವನ್ನು ಕೊಟ್ಟಮುಡಿ ಜಂಕ್ಷನ್ ನಿಂದ ಎಮ್ಮೆಮಾಡು ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸದಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಪಾಕಿರ್ಂಗ್ ಸ್ಥಳ: 1) ಪೊಲೀಸ್ ಮೈದಾನ

2) ಕಂದಾಯ ಇಲಾಖೆಯ ಮುಂಭಾಗ, 3) ಹಳೆ ಪೊಲೀಸ್ ವಸತಿ ತೆರವು ಮಾಡಿದ ಸ್ಥಳ

4) ಚೆರಿಯಪರುಂಬು ಕ್ರೀಡಾಂಗಣದ ಮುಂಭಾಗ ಮೈದಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net