ಸಂಸ್ಕಾರದ ಆಸಕ್ತಿ ಮೂಡಿಸುವಲ್ಲಿ ಪಾಲಕರ ಹೊಣೆಗಾರಿಕೆ ಅಗತ್ಯ

sid (7)
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಬಾಲಗೋಕುಲ ತರಗತಿ ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಶ್ರದ್ಧೆ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಮಹತ್ವ ಪಡೆಯುತ್ತವೆ. ಮಕ್ಕಳಿಗೆ ಧಾರ್ಮಿಕತೆ, ಉತ್ತಮ ಸಂಸ್ಕಾರಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಪಾಲಕರ ಹೊಣೆಗಾರಿಕೆ ಅಗತ್ಯ. ಧಾರ್ಮಿಕ ಹಿತ ಚಿಂತನೆ ದೇಶದ ಪ್ರಗತಿಗೆ ಪೂರಕ ಎಂದು ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಹೇಳಿದರು.

ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಸಭಾಭವನದಲ್ಲಿ ಗ್ರಾಮ ವಿಕಾಸ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಬೆಳ್ವೆ ಬಾಲಗೋಕುಲ ತರಗತಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ವಿಕಾಸ ಮಂಗಳೂರು ವಿಭಾಗ ಬಾಲಗೋಕುಲ ಸಂಯೋಜಕ ರವಿಚಂದ್ರ, ಹೆಬ್ರಿ ತಾಲೂಕು ಬಾಲಗೋಕುಲ ಸಂಯೋಜಕಿ ವೀಣಾ ಭಟ್ ಹೆಬ್ರಿ, ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ,ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ, ಸದಸ್ಯ ಎಸ್.ಚಂದ್ರಶೇಖರ ಶೆಟ್ಟಿ ಸುರ‌್ಗೋಳಿ, ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ ಬೆಳ್ವೆ, ಮಡಾಮಕ್ಕಿ ಬೆಪ್ಡೆ ಶ್ರೀರಾಮ ಬಾಲಗೋಕುಲದ ಮಾತೃ ಮಂಡಳಿ ಸಂಯೋಜಕಿ ಉಷಾ ಪಿ.ಶೆಟ್ಟಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಕಮ್ಗೋಳಿ, ಉಪಾಧ್ಯಕ್ಷ ಇಂಜಿನಿಯರ್ ಮಹಾಬಲ ನಾಯ್ಕ ಅಲ್ಬಾಡಿ, ಸದಸ್ಯ ಜಯಪ್ರಕಾಶ್ ಶೆಟ್ಟಿ ಗೋಳಿಯಂಗಡಿ, ಪತ್ರಕರ್ತ ಕೆ.ಸಂಜೀವ ಆರ್ಡಿ ಮತ್ತಿತರರು ಉಪಸ್ಥಿತರಿದ್ದರು.

ಬಾಲಗೋಕುಲ ತರಗತಿಯಲ್ಲಿ ಮಾತಾಜೀ ಅವರಿಗೆ ಮಾಹಿತಿ, ಮಕ್ಕಳಿಗೆ ಶ್ಲೋಕ, ಹಾಡು, ಆಟಗಳನ್ನು ಕಲಿಸಲಾಯಿತು. ಆರಂಭೋತ್ಸವದಲ್ಲಿ ಗಣ್ಯರು, 89 ಮಕ್ಕಳು, 75 ಪಾಲಕರು, 15 ಮಂದಿ ಇನ್ನಿತರರು ಪಾಲ್ಗೊಂಡಿದ್ದರು. ವಸಂತಕುಮಾರ್ ಶೆಟ್ಟಿ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿದರು. ಪವಿತ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net