ಪೋಷಕರೇ ಎಚ್ಚರ!: ನೀರಿನ ಸಂಪ್‌ಗೆ ಬಿದ್ದು 5 ವರ್ಷದ ಬಾಲಕ ಸಾವು

died
Published on

ಬೆಂಗಳೂರು: ಸಂಪ್​ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೆ.ಆರ್.​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ನಗರದ ವಿಶಾಲ್ ಮಾರ್ಟ್ ಮುಂಭಾಗ ನಡೆದಿದೆ. ನೇಪಾಳ ಮೂಲದ ಸುಬೀನ್ ಸಾವನ್ನಪ್ಪಿರುವ ಬಾಲಕ.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಂಪತಿ, ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಇನ್ನು ಕೆಲಸದಿಂದ‌ ಬಂದು ಮಗು ಕಾಣದೆ ಇದ್ದಾಗ ತಂದೆ-ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಪತ್ತೆಯಾಗಿದೆ.

ಕೂಡಲೇ ಕೆಆರ್​ಪುರ ಸರ್ಕಾರಿ‌ ಆಸ್ಪತ್ರೆ ದಾಖಲು ಮಾಡಲಾಗಿದೆ. ಆದ್ರೆ ಅಷ್ಟರವಳೆಗೆ ಮಗು ಸಾವನ್ನಪ್ಪಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net