ಮಕ್ಕಳ ಕಲಿಕೆಗೆ ಇರಲಿ ಪಾಲಕರ ಮಾರ್ಗದರ್ಶನ: ನಾರಾಯಣ ಗೌಡ ಸಲಹೆ

Btw_Talents
Published on

ಬಂಟ್ವಾಳ: ತರಗತಿ ಕೋಣೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ಮುತುವರ್ಜಿ ವಹಿಸುವಂತೆ ಮನೆಯಲ್ಲಿ ಪಾಲಕರು ಶೈಕ್ಷಣಿಕ ವಿಚಾರಗಳಲ್ಲಿ ಬೆರೆಯಬೇಕು ಎಂದು ನಿವೃತ್ತ ಬಿಆರ್‌ಪಿ ನಾರಾಯಣ ಗೌಡ ಅಭಿಪ್ರಾಯಪಟ್ಟರು.

ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಸಭಾ ಕಾರ್ಯಕ್ರಮ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪದೋನ್ನತಿ ಹೊಂದಿದ ಪುಷ್ಪರಾಜ್ ಬಿ. ಅವರನ್ನು, ಕಲಾ ಶಿಕ್ಷಕ ಸತ್ಯಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಟಿ. ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಹಾಗೂ ಕ್ರೀಡಾ ಮತ್ತು ಕಲಿಕಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗೋಳ್ತಮಜಲ್ ಗ್ರಾಪಂ ಸದಸ್ಯರಾದ ಪುರುಷೋತ್ತಮ್, ಎಸ್‌ಡಿಎಂಸಿ ಸದಸ್ಯರಾದ ಬಾಲಕೃಷ್ಣ ಕೊಟ್ಟಾರಿ, ನಾಗೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಶಿಕ್ಷಕಿ ಸುನಿತಾ ಸ್ವಾಗತಿಸಿದರು. ಮುಖ್ಯಶಿಕ್ಷಕ ರಮೇಶ್ ವರದಿ ವಾಚಿಸಿದರು. ಶಿಕ್ಷಕರಾದ ಸತ್ಯಶಂಕರ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಂಕರ್ ಪಾವಸ್ಕರ್ ವಂದಿಸಿದರು. ಸುಜಾತ ಎಂ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net