ಅಧ್ಯಕ್ಷರಾಗಿ ಪರಮೇಶ್ವರ ಆಯ್ಕೆ

ಅಧ್ಯಕ್ಷರಾಗಿ ಪರಮೇಶ್ವರ ಆಯ್ಕೆ
Published on

ತಿ.ನರಸೀಪುರ: ತಾಲೂಕಿನ ಉಕ್ಕಲಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪರಮೇಶ್ವರ ಹಾಗೂ ಉಪಾಧ್ಯಕ್ಷರಾಗಿ ಜಯಂತಿ ಸಿದ್ದರಾಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆ ಘೋಷಿಸಲಾಯಿತು. ಪರಮೇಶ್ವರ ಹಾಗೂ ಜಯಂತಿ ಸಿದ್ದರಾಮು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಹಸೀನಾ ಕಾರ್ಯನಿರ್ವಹಿಸಿದರು.

ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಸಂಘದ ಕಾರ್ಯ ನಿರ್ವಹಣಾಧಿಕಾರಿ ಮಣಿಕಂಠ ಸ್ವಾಮಿ, ಮಂಜುನಾಥ್, ರವಿಶಂಕರ್, ನಾಗೇಂದ್ರ, ಪಾಪಣಿ, ನಾಗರಾಜು, ರವಿ, ಮಹದೇವಸ್ವಾಮಿ, ಹಾಸಪ್ಪ ಮನು, ನಿಂಗರಾಜು, ಸಿದ್ದರಾಮು, ಪ್ರಭುಸ್ವಾಮಿ, ಮಹದೇವಸ್ವಾಮಿ, ಮಲ್ಲೇಶ್, ಮಹದೇವಶೆಟ್ಟಿ, ನಾಗೇಂದ್ರ, ಮಹದೇವಪ್ಪ, ಮಾಧು, ನಾಗರಾಜಪ್ಪ, ರುದ್ರ, ಮಹದೇವಸ್ವಾಮಿ, ನಂದೀಶ್, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net