

ಬೆಸ್ಕಾಂ ಮಾಜಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಮುಮ್ಮೆನಹಳ್ಳಿ ಜಯರಾಮು ಅನಿಸಿಕೆ
ಮಾಗಡಿ: ಸ್ವಾತಂತ್ರ್ಯಗೊಂಡು ದಶಕಗಳೇ ಕಳೆದರೂ ನಮ್ಮ ಹಕ್ಕು ನಮಗೆ ನೀಡಿಲ್ಲ. ಹಾಗಾಗಿ ಡಾ.ಅಂಬೇಡ್ಕರ್ ಆಶಯ ಈಡೇರಬೇಕಾದರೆ ಡಾ.ಜಿ.ಪರಮೇಶ್ವರ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು. ಅವರ ಪ್ರಾಮಾಣಿಕ ಆಡಳಿತದಿಂದ ರಾಜ್ಯ ಸುಭಿಕ್ಷವಾಗಿರುವುದಲ್ಲದೇ ಎಲ್ಲ ಸಮುದಾಯಗಳಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಬೆಸ್ಕಾಂ ಮಾಜಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಮುಮ್ಮೆನಹಳ್ಳಿ ಬಿ.ವಿ.ಜಯರಾಮು ಹೇಳಿದರು.
ಗೃಹ ಸಚಿವ ಪರಮೇಶ್ವರ ಜನ್ಮದಿನದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಪೌರಕಾರ್ಮಿಕರಿಗೆ ಸಮವಸ ವಿತರಿಸಿದರು. ರಾಜಕಾರಣದಲ್ಲಿ ಸಾಕಷ್ಟು ಅನುಭವದ ಜತೆಗೆ ಆಸ್ಟ್ರೆಲಿಯಾದಲ್ಲಿ ಡಾಕ್ಟರೇಟ್ ಗಳಿಸಿದ ಪರಮೇಶ್ವರ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು 7 ಕೋಟಿ ಜನರ ಆಸೆ. ಈ ಆಸೆಯನ್ನು 2028ರೊಳಗೆ ಎಐಸಿಸಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈಡೇರಿಸಬೇಕು ಎಂದರು.
ಪರಮೇಶ್ವರ ಅವರು ಮಾಗಡಿ ತಾಲೂಕಿನವರೇ ಆಗಿದ್ದು, ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಶಾಶ್ವತ ಯೋಜನೆಗಳು ಬರುತ್ತಿವೆ ಎಂದು ಜಯರಾಮು ತಿಳಿಸಿದರು.
ದಲಿತ ಮುಖಂಡರಾದ ಚಿಕ್ಕರಾಜು, ರವಿಕುಮಾರು, ಲಕ್ಷ್ಮಣ್, ಕೃಷ್ಣಮೂರ್ತಿ, ನಾಗರಾಜು, ಲಕ್ಷ್ಮೀಪತಿರಾಜು, ಜೀವಿಕ ಗಂಗಹನುಮಯ್ಯ, ಡಿ.ಸಿ.ಶಿವಣ್ಣ, ಕೋರಮಂಗಲ ಶ್ರೀನಿವಾಸ್, ಬೀಚನಹಳ್ಳಿ ಸುರೇಶ್ ಇದ್ದರು.
2 ಬಾರಿ ಅಧಿಕಾರಕ್ಕೆ ತಂದ ಶ್ರೇಯ
ಡಾ.ಜಿ.ಪರಮೇಶ್ವರ ಅವರು ಮೂರು ದಶಕಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿ, ವಿವಿಧ ಇಲಾಖೆಗಳ ಸಚಿವರಾಗಿ 3ನೇ ಬಾರಿ ಗೃಹಸಚಿವರಾಗಿದ್ದಾರೆ. 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ, 2 ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಲ್ಲದೆ ಈ ಬಾರಿ ವಿಧಾನಸಭಾ ಚುನಾವಣೆ ವೇಳೆಯೂ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರು ಪಂಚ ಗ್ಯಾರಂಟಿ ಜಾರಿಗೊಳಿಸಿದ್ದು, 5 ಕೋಟಿ ಜನ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಜಯರಾಮು ಬಣ್ಣಿಸಿದರು.
ಜಾತ್ಯತಿತ ನಾಯಕ
ತಾಲೂಕು ರೈತಸಂದ ಅಧ್ಯಕ್ಷ ಲೋಕೇಶ್ ಮಾತನಾಡಿ, ಜಿ.ಪರಮೇಶ್ವರ ಅವರು ಜಾತ್ಯತಿತ, ಪಾತೀತ ರಾಜಕಾರಣಿ. ಅವರಿಗೆ ಉತ್ತಮ ಸ್ಥಾನಮಾನ ಸಿಗಲಿ. ಅದರಂತೆ ಬಿವಿ.ಜಯರಾಮು ಅವರಿಗೂ ಉನ್ನತ ಸ್ಥಾನ ಲಭಿಸಲಿ ಎಂದರು. ತಾಪಂ ಮಾಜಿ ಸದಸ್ಯ ಸಿ.ಜಯರಾಮು ಮಾತನಾಡಿದರು.