ಎಪಿಸಿಎಂಎಸ್ ಅಧ್ಯಕ್ಷರಾಗಿ ಪರಮೇಶ್ ಆಯ್ಕೆ

07SPT9
Published on

ಸೋಮವಾರಪೇಟೆ: ಎಪಿಸಿಎಂಎಸ್ ಅಧ್ಯಕ್ಷರಾಗಿ ಎನ್.ಟಿ.ಪರಮೇಶ್ ಅವಿರೋಧವಾಗಿ ಆಯ್ಕೆಯಾದರು.


ಹಾಲಿ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಎನ್.ಟಿ.ಪರಮೇಶ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ವಿಜಯೇಂದ್ರ ಅವರು ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.


ಉಪಾಧ್ಯಕ್ಷ ಟಿ.ಕೆ.ರಮೇಶ್, ಸದಸ್ಯರಾದ ಜಿ.ಬಿ.ಸೋಮಯ್ಯ, ಬಿ.ಎಂ.ರಾಮ್‌ಪ್ರಸಾದ್, ಎಸ್.ಎ.ಪ್ರತಾಪ್, ಡಿ.ಎಚ್.ಉಮೇಶ್ ರಾಜ್ ಅರಸ್, ಎಂ.ಸಿ.ರಾಘವ, ಯು.ಎಂ.ಬಸವರಾಜು, ಬಿ.ಎಸ್.ಸುಶೀಲಾ, ಎಚ್.ವಿ.ಸುಜಾತಾ ಹಾಗೂ ಕೆ.ಯು. ಶ್ಯಾಮಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net