ಸಮಾನಾಂತರ ಲಾಟರಿ, ನಾಲ್ವರ ಬಂಧನ

GAMBLING
Published on

ಕಾಸರಗೋಡು: ಸವಾನಾಂತರ ಲಾಟರಿ ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಭಗವತ ನಗರದ ಜಿ.ಆರ್.ರಾಧಾಕೃಷ್ಣ, ಕೂಡ್ಲು ಆರ್.ಡಿ.ನಗರದ ಅಭಿಷೇಕ್ ಕುವಾರ್, ರಾಮದಾಸನಗರ ಹೊಸಮನೆ ರಸ್ತೆಯ ಪವನ್‌ರಾಜ್ ಹಾಗೂ ಕೋಟೆಕಣಿ ರಸ್ತೆಯ ರಾಜಾಪ್ರಸಾದ್ ಬಂಧಿತರು. ಬಂಧಿತರಿಂದ ಜೂಜಿಗೆ ಬಳಸಿದ್ದರೆನ್ನಲಾದ 26490 ರೂ. ನಗದು ವಶಪಡಿಸಿದ್ದಾರೆ. ಕೇರಳ ರಾಜ್ಯ ಲಾಟರಿ ಕಾಯ್ದೆಯನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ತಮ್ಮದೇ ಆದ ಲಾಟರಿ ಅಂಕಿ ಫಲಿತಾಂಶವನ್ನು ಮೊಬೈಲ್ ಮೂಲಕ ತಲುಪಿಸುವುದು ಸವಾನಾಂತರ ಲಾಟರಿ ಕಾರ್ಯನಿರ್ವಹಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net