

ಮಧೂರು: ಶಿವರಾತ್ರಿ ಉತ್ಸವಕ್ಕೆ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ ಸಜ್ಜಾಗಿದೆ. ಫೆ.26ರಂದು ಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವದಲ್ಲಿ ಶಿವರಾತ್ರಿ ಸಂಪನ್ನಗೊಳ್ಳಲಿದೆ.
ಬೆಳಗ್ಗೆ 6ಕ್ಕೆ ಗಣಪತಿ ಹೋಮ, ರುದ್ರಾಭಿಷೇಕ, 8ರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಬಲಿವಾಡು, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಶ್ರೀದೇವರ ಉತ್ಸವಬಲಿ ಪ್ರಾರಂಭವಾಗಲಿದೆ. 10.30ಕ್ಕೆ ಉಳಿಯ ಶ್ರೀ ಧನ್ವಂತರಿ ಸನ್ನಿಧಿಗೆ ದೇವರ ಘೋಷಯಾತ್ರೆ, ಮರಳಿ ಬಂದು ಪರಕ್ಕಿಲ ಬೆಡಿಕಟ್ಟೆಯಲ್ಲಿ ಪೂಜೆ ಬಳಿಕ ರಾಜಾಂಗಣ ಪ್ರಸಾದ, ಶಾಸ್ತಾ ಪಾಟು ಉತ್ಸವ ಜರುಗಲಿದೆ.
ಬೆಳಗ್ಗೆ 8ರಿಂದ ಶ್ರೀ ಮಹಾದೇವ ಶಾಸ್ತಾ ವಿನಾಯಕ ಭಜನಾ ಸಂಘ ಮತ್ತು ಮಹಿಳಾ ಭಜನಾ ಸಂಘ ಪರಕ್ಕಿಲ ಅವರಿಂದ ಭಜನಾ ಸೇವೆ ನಡೆಯಲಿದೆ. ಬೆಳಗ್ಗೆ 9ರಿಂದ 10.30ರತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ವಾದನ ನಡೆಯಲಿದ್ದು ಹಾಡುಗಾರಿಕೆಯಲ್ಲಿ ಸರಸ್ವತಿ ಕೃಷ್ಣನ್ ಕುಮಾರಮಂಗಲ, ವಯಲಿನ್ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶ್ರೀವಿದ್ಯಾ, ಮೃದಂಗದಲ್ಲಿ ಕೆ.ಶ್ರೀಧರ ರೈ ಕಾಸರಗೋಡು ಸಹಕರಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7ರಿಂದ ಅಮೃತ ಕಲಾಕ್ಷೇತ್ರ ರಾಮದಾಸನಗರ ಅವರಿಂದ ಶಾಸ್ತ್ರೀಯ ನೃತ್ಯ ಜರುಗಲಿದೆ. ಬಾಲಗೋಕುಲದ ಮಕ್ಕಳಿಂದ ನೃತ್ಯ ಪ್ರದರ್ಶನ, ತರುಣ ಕಲಾವೃಂದದ ಮಹಿಳಾ ಸದಸ್ಯೆಯರಿಂದ ತಿರುವಾದಿರ ನೃತ್ಯ, ಶ್ರೀರಕ್ಷಾ ರಾಮ್ಕಿಶೋರ್ ಅವರಿಂದ ಭರತನಾಟ್ಯ ಜರುಗಲಿದೆ.