ನೇತ್ರಾವತಿ ಸ್ನಾನಘಟ್ಟದಲ್ಲಿ ಶವ ಪತ್ತೆ

Death Case
Published on

ಉಪ್ಪಿನಂಗಡಿ : ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ನೇತ್ರಾವತಿ ನದಿ ಸ್ನಾನಘಟ್ಟದಲ್ಲಿ ಶುಕ್ರವಾರ ತಡರಾತ್ರಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದ್ದು, ಮೃತನ ಪ್ಯಾಂಟಿನಲ್ಲಿದ್ದ ಮೊಬೈಲ್ ಪೋನ್ ಆಧಾರದಲ್ಲಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕನ್ಯಾರಕೋಡಿಯ ಮಹಮ್ಮದ್ ಯಾಸೀರ್ (33) ಎಂದು ಗುರುತಿಸಲಾಗಿದೆ. ದೇವಳದ ಭದ್ರತಾ ಸಿಬ್ಬಂದಿ ಪರಿಶೀಲನಾ ನಿರತರಾಗಿದ್ದ ವೇಳೆ ಸ್ನಾನಘಟ್ಟದಲ್ಲಿ ಶವ ತೇಲುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಶವವನ್ನು ನೀರಿನಿಂದ ಮೇಲೆತ್ತಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು. ಮೃತ ಮಹಮ್ಮದ್ ಯಾಸೀರ್ ಗಾಂಜಾ ಸಾಗಾಟದ ದಂಧೆಯಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು, ಆತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಪತ್ನಿ ಮತ್ತು ಮಗುವನ್ನು ಅಗಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net