ದೇಶ ವಿಭಜನೆಯ ಕರಾಳ ದಿನದ ಅರಿವು : ಪ್ರದೀಪ್ ಸರಿಪಲ್ಲ ಆಶಯ : ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆ

panju
ಅಖಂಡ ಭಾರತ ಸಂಕಲ್ಪಕ್ಕಾಗಿ ಮಂಗಳವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು. ನಿವೃತ್ತ ಯೋಧ ಎನ್.ವಿಶ್ವನಾಥ ಶೆಣೈ, ವಿಹಿಂಪ ಉಪ್ಪಿನಂಗಡಿ ಪ್ರಖಂಡ ಅಧ್ಯಕ್ಷ ಸುದರ್ಶನ್, ಅಖಾಡ ಪ್ರಮುಖ್ ಕಿಶೋರ್ ನೀರಕಟ್ಟೆ ಉಪಸ್ಥಿತರಿದ್ದರು.
Published on

ಉಪ್ಪಿನಂಗಡಿ: ವಿಶ್ವ ಹಿಂದು ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪಕ್ಕಾಗಿ ಮಂಗಳವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರದಿಂದ ಆರಂಭಗೊಂಡ ಮೆರವಣಿಗೆ ಗಾಂಧಿಪಾರ್ಕ್ ತನಕ ಸಾಗಿ ಶ್ರೀ ದೇವಾಲಯದ ವಠಾರದಲ್ಲಿ ಸಂಪನ್ನವಾಯಿತು.

ದಿಕ್ಸೂಚಿ ಮಾತುಗಳನ್ನಾಡಿದ ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ದೇಶ ವಿಭಜನೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ತ್ರಿಖಂಡವಾಗಿರುವ ಭರತ ಭೂಮಿ ಅಖಂಡವಾಗಿಸುವ ನಿಟ್ಟಿನಲ್ಲಿ ಪರಿಶ್ರಮಿಸುವ ಸಲುವಾಗಿ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಗುತ್ತಿದೆ ಎಂದರು.

ನಿವೃತ್ತ ಯೋಧ ಎನ್.ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಉಪ್ಪಿನಂಗಡಿ ಪ್ರಖಂಡ ಅಧ್ಯಕ್ಷ ಸುದರ್ಶನ್, ಅಖಾಡ ಪ್ರಮುಖ್ ಕಿಶೋರ್ ನೀರಕಟ್ಟೆ ಉಪಸ್ಥಿತರಿದ್ದರು.

ಮಾಜಿ ಶಾಸಕ ಸಂಜೀವ ಮಠಂದೂರು, ಮುಕುಂದ ಬಜತ್ತೂರು, ಸದಾನಂದ ಶೆಟ್ಟಿ, ಸುರೇಶ್ ಅತ್ರೆಮಜಲು, ಹೇರಂಭ ಶಾಸ್ತ್ರಿ, ಉಮೇಶ್ ಶೆಣೈ, ಸಂತೋಷ್ ಕುಮಾರ್ ಪಂರ್ದಾಜೆ, ಹರಿರಾಮಚಂದ್ರ, ಸುಧೀರ್ ತೆಕ್ಕಾರ್, ಚವಾನ್, ಹರೀಶ್ ಬೆದ್ರೋಡಿ, ಕಿಶನ್ ಕಾಂಚನ, ಸಂತೋಷ್ ಅಡೆಕ್ಕಲ್, ಧನಂಜಯ ನಟ್ಟಿಬೈಲು, ವಿಶ್ವನಾಥ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಕೈಲಾರ್ ರಾಜಗೋಪಾಲ ಭಟ್, ಪ್ರಶಾಂತ್ ಎನ್., ಹರೀಶ್ ಡಿ., ಉಷಾ ಮುಳಿಯ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಚಂದ್ರಶೇಖರ ಮಡಿವಾಳ, ಮಂಜುನಾಥ ಕಂಗಿನಾರ್ ಬೆಟ್ಟು, ಮಹೇಶ್ ಬಜತ್ತೂರು, ಪೂರ್ಣಚಂದ್ರ ಕಾಂಚನ, ತಿಮ್ಮಪ್ಪ ಗೌಡ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.

ವಿಮೇಶ್ ವಿ.ಶೆಟ್ಟಿ ಪ್ರಾರ್ಥಿಸಿದರು. ಪ್ರಖಂಡ ಕಾರ್ಯದರ್ಶಿ ರಾಜಶೇಖರ್ ಕರಾಯ ಸ್ವಾಗತಿಸಿದರು. ಪ್ರಖಂಡ ಸಂಯೋಜಕ ಸಂತೋಷ್ ಪೆರಿಯಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net