ಮಿಲಿಟರಿ ಪಡೆಗಳಿಂದ ಪರೇಡ್

military parade
Published on

ರಟ್ಟಿಹಳ್ಳಿ: ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಪೊಲೀಸ್ ಅಧಿಕಾರಿಗಳಿಂದ ಪಟ್ಟಣದಲ್ಲಿ ಶನಿವಾರ ಪರೇಡ್ ನಡೆಯಿತು.

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಿಳೆಯರು, ಪಡೆಯಗಳ ಮುಖ್ಯಸ್ಥರಿಗೆ ಆರತಿ ಬೆಳಗಿ, ಪುಷ್ಪಗುಚ್ಛ ಅರ್ಪಿಸಿದರು.

ಭಾರತ ಮಾತಾ ಕೀ ಜೈ ಘೋಷಗಳೊಂದಿಗೆ ಸ್ಥಳೀಯ ನಿವಾಸಿಗಳು ಯೋಧರಿಗೆ ಗೌರವ ಸಮರ್ಪಿಸಿದರು. ನೂರಾರು ಯೋಧರು ಪಟ್ಟಣದ ಹಳೇ ಬಸ್ ನಿಲ್ದಾಣ, ಕೋಟೆ ಓಣಿ, ಕದಂಬ ನಗರ, ಕಾರಂಜಿ ಸರ್ಕಲ್, ಕುಮಾರೇಶ್ವರ ಶಾಲೆ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net