

ಬೆಂಗಳೂರು: ಕಿರಾಣಾ ಘರಾನಾದ ಪ್ರಸಿದ್ಧ ಸಂಗೀತಗಾರ, ಇತ್ತೀಚೆಗಷ್ಟೇ ಫ್ರಾನ್ಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೆ ಭಾಜನರಾದ ಪಂಡಿತ್ ಕೈವಲ್ಯಕುಮಾರ ಗುರವ ಅವರ ಸಂಗೀತ ಕಛೇರಿ ಯುಗಾದಿ (ಮಾ.22) ದಿನ ನಗರದಲ್ಲಿ ಆಯೋಜನೆಗೊಂಡಿದೆ.
ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಂಜೆ 4. 45ರಿಂದ ಈ ಯುಗಾದಿ ಸಂಗೀತೋತ್ಸವ ನಡೆಯಲಿದ್ದು, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಹೇಶ ಕರಜಗಿ, ಹರಿದಾಸ ಸಂಪದ ಟ್ರಸ್ಟ್ನ ಬಿ.ಎಸ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕೈವಲ್ಯಕುಮಾರ ಆವರಿಗೆ ತಬಲಾದಲ್ಲಿ ಪಂಡಿತ್ ಕೇಶವ ಜೋಶಿ, ಹಾರ್ಮೋನಿಯಂನಲ್ಲಿ ಪಂಡಿತ್ ರವೀಂದ್ರ ಕಾಟೋಟಿ, ತಾಳದಲ್ಲಿ ವೆಂಕಟೇಶ್ ಪುರೋಹಿತ್ ಸಾಥ್ ನೀಡುವರು. ಇದಕ್ಕೂ ಮುನ್ನ ಸಿದ್ಧಲಿಂಗಯ್ಯ ಹಿರೆಮಠ ಅವರ ಗಾಯನವಿದ್ದು ವಿನಯ ಕುಲಕರ್ಣಿ ಹಾಗೂ ತೇಜಸ್ ಕಾಟೋಟಿ ಕ್ರಮವಾಗಿ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡುವರು. ಬಾಗಲಕೋಟೆಯ ಸಂಗೀತ ವಿದ್ಯಾಲಯ ಹಾಗೂ ಕಲಾಸಂಘವು ಬೆಂಗಳೂರಿನ ಅನಾಮಿಕ ಹಾಗೂ ನಿತಿನ್ ದವಳೆ ಅವರ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿದೆ.