

ಬೆಂಗಳೂರು: 'ಕೆಂಪೇಗೌಡ 2' ನಂತರ ಕೋಮಲ್ ನಟಿಸಿರುವ ಹಾಸ್ಯ ಚಿತ್ರವೊಂದು ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರಕ್ಕೆ 'ಉಂಡೆನಾಮ' ಎಂಬ ಹೆಸರಿಡಲಾಗಿದ್ದು, ಏ.14ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
'ಉಂಡೆನಾಮ' ಚಿತ್ರದ ಶೀರ್ಷಿಕೆಯನ್ನು ಹೇಳುವ ಮೂಲಕ ಜಗ್ಗೇಶ್, 'ನೆನಪಿರಲಿ' ಪ್ರೇಮ್, ಶರಣ್, ಶ್ರುತಿ ಮುಂತಾದವರು ವಿಭಿನ್ನವಾಗಿ ಅನಾವರಣಗೊಳಿಸಿದ್ದಾರೆ. ಇವರೆಲ್ಲರೂ ಚಿತ್ರತಂಡಕ್ಕೆ ಶುಭ ಹಾರೈಸಿರುವ ವಿಡಿಯೋ, ಸೋಷಿಯಲ್ ಮೀಡಿಆದಲ್ಲಿ ವೈರಲ್ ಆಗಿದೆ.
ಕೋಮಲ್ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸಿದ್ದು, ಮಿಕ್ಕಂತೆ ಹರೀಶ್ ರಾಜ್, ತಬಲಾ ನಾಣಿ, ಅಪೂರ್ವ, ತನಿಷ ಕುಪ್ಪಂದ, ಬ್ಯಾಂಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಕೆ. ಸ್ಟುಡಿಯೋಸ್ನಡಿ ನಂದಕಿಶೋರ್ ನಿರ್ಮಿಸಿದರೆ, ಸಂಭಾಷಣೆಕಾರ ಕೆ.ಎಲ್. ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಮತ್ತು ನವೀನ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸುಮಾರು ಮೂರೂವರೆ ವರ್ಷಗಳ ನಂತರ ಕೋಮಲ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದ್ದು, ಇದಲ್ಲದೆ 'ಕಾಲಾಯ ನಮಃ', 'ರೊಲೆಕ್ಸ್' ಮತ್ತು 'ಯಲಾ ಕುನ್ನಿ' ಚಿತ್ರಗಳಲ್ಲೂ ಕೋಮಲ್ ನಟಿಸುತ್ತಿದ್ದಾರೆ.