ಸರ್ಕಾರದ ವಿರುದ್ಧ ಸಿಡಿದೆದ್ದ ಪಂಚಮಸಾಲಿ ಸಮುದಾಯ: ವಿರಾಟ್ ಪಂಚಶಕ್ತಿಗೆ ಹರಿದು ಬಂದ ಜನಸಾಗರ

panchamasali belagavi
Published on

ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಇಂದು(ಗುರುವಾರ) ನಡೆಯುತ್ತಿರುವ ಪಂಚಮಸಾಲಿ ಸಮುದಾಯದ ಬೃಹತ್​ ಪ್ರತಿಭಟನಾ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದ್ದು, ವಿರಾಟ್ ಪಂಚಶಕ್ತಿ ಪ್ರದರ್ಶನವಾಗುತ್ತಿದೆ.

ಸುವರ್ಣ ವಿಧಾನಸೌಧ ಬಳಿ ರಾಘವೇಂದ್ರ ಕಾಲನಿ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಪಂಚಮಸಾಲಿ ವಿರಾಟ್ ಶಕ್ತಿ ಸಮಾವೇಶಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ, ದಾವಣಗೆರೆ, ಹಾವೇರಿ, ಮೈಸೂರು, ವಿಜಯಪುರ, ಕೊಪ್ಪಳ, ಕಲಬುರಗಿ, ಬಳ್ಳಾರಿ ಸೇರಿದಂತೆ‌ ರಾಜ್ಯದ ವಿವಿಧ ಜಿಲ್ಲೆಗಳಿಂದ‌ ಲಕ್ಷಕ್ಕೂ ಅಧಿಕ ಜನರು ಬುತ್ತಿ ಸಮೇತ ಆಗಮಿಸಿದ್ದಾರೆ.

ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದ್ದು, ಸರ್ಕಾರ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸದಿದ್ದಲ್ಲಿ ಬೆಳಗಾವಿ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net