ರಾಮಕುಂಜದಲ್ಲಿ ಪಂಚಗವ್ಯ ಶಿಬಿರ, ವಿಚಾರಗೋಷ್ಠಿ

mahiti
Published on

ಕಡಬ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಲ ಆಶ್ರಯದಲ್ಲಿ ಗೋ ಸೇವಾ ಗತಿನಿಧಿ ಮತ್ತು ಗ್ರಾಮ ವಿಕಾಸ ಗತಿನಿಧಿ ಮಂಗಳೂರು ವಿಭಾಗದ ಸಹಯೋಗದೊಂದಿಗೆ ಪಂಚಗವ್ಯ ಚಿಕಿತ್ಸಾ ಶಿಬಿರ ಮತ್ತು ವಿಚಾರಗೋಷ್ಠಿ ಸೋಮವಾರ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ನಡೆಯಿತು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಶಿಬಿರ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಬಾಲಕೃಷ್ಣ ಭಟ್ ಬರೆಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಂಗಳೂರು ವಿಭಾಗದ ಗೋ ಸೇವಾ ಪ್ರಮುಖ್ ಗಂಗಾಧರ, ಆಯುರ್ವೇದ ವೈದ್ಯ ಮತ್ತು ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ, ಸೈಕನ್ಯೂರೋ ಇಮ್ಯುನೋಲಾಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞ ಡಾ.ಅವಿನಾಶ್ ಸಲ್ಗಾರ್ ಬೆಂಗಳೂರು, ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಉಪಸ್ಥಿತರಿದ್ದರು.

ಗ್ರಾಮ ವಿಕಾಸ ರಾಮಕುಂಜ ಗ್ರಾಮ ಸಮಿತಿ ಸಂಯೋಜಕ ಪದ್ಮಪ್ಪ ಗೌಡ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಬರೆಂಬೆಟ್ಟು ವಂದಿಸಿದರು. ಗ್ರಾಮ ವಿಕಾಸ ಗತಿನಿಧಿ ಕಡಬ ತಾಲೂಕು ಪ್ರಮುಖ್ ಜನಾರ್ದನ ಕದ್ರ ನಿರೂಪಿಸಿದರು.

ಮಾಹಿತಿ ವಿನಿಮಯ

ಉದ್ಘಾಟನಾ ಸಮಾರಂಭದ ಬಳಿಕ ವಿಚಾರಗೋಷ್ಠಿಯಲ್ಲಿ ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಅವರು ಮಲೆನಾಡು ಗಿಡ್ಡ ತಳಿಯ ಹಸುಗಳ ಕುರಿತು ಮಾಹಿತಿ ಹಂಚಿಕೊಂಡರು. ಬಳಿಕ ನಡೆದ ಗೋಷ್ಠಿಯಲ್ಲಿ ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ ಕುರಿತು ಆಯುರ್ವೇದ ವೈದ್ಯರು ಮತ್ತು ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ ಅವರು ಮಾಹಿತಿ ನೀಡಿದರು. ವಿಚಾರಗೋಷ್ಟಿಯಲ್ಲಿ ಸೈಕನ್ಯೂರೋ ಇಮ್ಯುನೋಲಾಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞರಾದ ಡಾ.ಅವಿನಾಶ್ ಸಲ್ಗಾರ್ ಪಂಚಗವ್ಯ ಚಿಕಿತ್ಸೆ, ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಹಾಗೂ ಮನೋದೈಹಿಕ ಕಾಯಿಲೆಗಳು ಮತ್ತು ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net