ತಾಲೂಕಿನಾದ್ಯಂತ ಭಕ್ತರಿಂದ ಪಂಚಲಿಂಗ ದರ್ಶನ

FotoJet (3)
ಶಿಡ್ಲಟ್ಟ ತಾಲೂಕಿನ ಬೂದಾಳದ ಮಲೆಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
Published on

ಶಿಡ್ಲಟ್ಟ: ನಗರ ಹಾಗೂ ತಾಲೂಕಿನಾದ್ಯಂತ ಶಿವರಾತ್ರಿ ಆಚರಣೆ ಪ್ರಯುಕ್ತ ಎಲ್ಲ ಶಿವಾಲಯಗಳಲ್ಲೂ ಬೆಳಗ್ಗೆಯಿಂದ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆಗಳು ನಡೆದವು.

ಪಂಚಲಿಂಗಗಳಾದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಸ್ಥಾನ ಸೇರಿ ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳಿಗೆ ಭಕ್ತರು ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ ಪಡೆದರು.

ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ದ್ವಾದಶ ಲಿಂಗಗಳ ದರ್ಶನ ಏರ್ಪಡಿಸಲಾಗಿತ್ತು. ಶಿವನ ಜೀವನ ಚರಿತ್ರೆ, ಸಾಾತ್ಕಾರ ಕುರಿತು ವಿಶೇಷ ಉಪನ್ಯಾಸ, ಪ್ರವಚನದ ಜತೆಗೆ ಜಾಗರಣೆ, ಉಪವಾಸದ ಮಹಿಮೆ ಕುರಿತು ಭಕ್ತರಿಗೆ ವಿವರಿಸಲಾಯಿತು. ತಾಲೂಕಿನ ಮಳ್ಳೂರಿನ ಸಾಯಿಬಾಬಾ ಮಂದಿರದಲ್ಲಿನ ಜಲಕಂಠೇಶ್ವರಸ್ವಾಮಿಗೆ ಕುಂಬಾಭಿಷೇಕ, ರುದ್ರಹೋಮ, ಪಲ್ಲಕ್ಕಿ ಸೇವೆ ಮತ್ತು ಪುಷ್ಪಾಭಿಷೇಕ ವೀಸಲು ನೂರಾರು ಭಕ್ತರು ಆಗಮಿಸಿದ್ದರು. ಬೂದಾಳದ ಮಲೆಮಲ್ಲೇಶ್ವರ ದೇವಾಲಯ, ನಲ್ಲರಾಳ್ಳಿ ಬಳಿಯ ಶ್ರೀರಾಮಲಿಂಗನಬೋಡು ದೇವಾಲಯ, ಗುಡಿಹಳ್ಳಿಯ ಸೋಮೇಶ್ವರಸ್ವಾಮಿ, ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ ಸೇರಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು.

ಚೌಡಸಂದ್ರದ ಸೋಮೇಶ್ವರ ದೇಗುಲದಲ್ಲಿ ಶಿವರಾತ್ರಿಯಂದು ಬೆಳಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವುದು ವಿಶೇಷ ಆಕರ್ಷಣೆ. ಸುತ್ತಮುತ್ತಲ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದರು. ಎಲ್ಲ ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಫಲಾಹಾರ ವಿತರಣೆ, ಭಜನೆ, ಹರಿಕಥಾ ಕಾಲೇಪ ಏರ್ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net