ಪಾಂಚಜನ್ಯ ಗಣೇಶೋತ್ಸವ ಪೂಜಾ ಕೈಂಕರ್ಯಕ್ಕೆ ಚಾಲನೆ

ಪಾಂಚಜನ್ಯ ಗಣೇಶೋತ್ಸವ ಪೂಜಾ ಕೈಂಕರ್ಯಕ್ಕೆ ಚಾಲನೆ
Published on

ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಪ್ರತಿ ಪ್ರತಿಷ್ಠಾಪಿಸಲಾಗುವ ಪಾಂಚಜನ್ಯ ಗಣೇಶೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಧ್ವಜ ಪೂಜೆ ಹಾಗೂ ಗೋಪೂಜೆ ಮಾಡುವುದರ ಮೂಲಕ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಪಾಂಚಜನ್ಯ ಗಣಪತಿ ಸಮಿತಿ ಕಾರ್ಯದರ್ಶಿ ವೇಣುಗೋಪಾಲ್, ಸಮಿತಿಯಿಂದ ಆ.27 ರಿಂದ ಸೆ.3 ರ ವರೆಗೆ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಳು ದಿನ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದರು.

ರಾಜ್ಯ ಸರ್ಕಾರ ಗಣೇಶೋತ್ಸವ ಹುಮ್ಮಸ್ಸನ್ನು ಕಡಿಮೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ. ಡಿಜೆ ಬ್ಯಾನ್ ಮಾಡಬೇಕು ಎನ್ನುವ ಹುನ್ನಾರ, ಫ್ಲೆಕ್ಸ್ ಪ್ರಕಟಕ್ಕೂ ಮುನ್ನವೇ ಪೊಲೀಸ್ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಹಿಂದು ಕಾರ್ಯಕರ್ತರ ಸ್ವಾತಂತ್ರೃ ಕಸಿಯಲಾಗಿದೆ ಎಂಬ ಆರೋಪ ಇದೆ. ಕಾಂಗ್ರೆಸ್ ಸರ್ಕಾರ ಹಿಂದುಗಳು ಶಾಂತಿಯಿಂದ, ನೆಮ್ಮದಿಯಿಂದ ಗಣೇಶೋತ್ಸವ ಮಾಡಲು ತಡೆ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ನಿಯಮಗಳನ್ನು ಸಡಿಲ ಮಾಡಬೇಕು. ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಸಾಧ್ಯವಾದಷ್ಟು ಫ್ಲೆಕ್ಸ್‌ಗಳನ್ನು ಕಡಿಮೆ ಮಾಡಲಾಗುವುದು. ಬಟ್ಟೆ ಬಾವುಟ, ಬ್ಯಾನರ್ ಉಪಯೋಗಿಸುತ್ತೇವೆ ಎಂದರು.

ಪಾಂಚಜನ್ಯ ಗಣಪತಿ ಸಮಿತಿ ಅಧ್ಯಕ್ಷ ವಾಸು, ಗೌರವಾಧ್ಯಕ್ಷ ದಯಾನಂದ್, ಹಿಂದು ಜಾಗರಣ ವೇದಿಕೆ ಲೋಕೇಶ್, ವಿಎಚ್‌ಪಿ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ಕಂಚಮಾರನಹಳ್ಳಿ ಕಾಂತಣ್ಣ, ವಿಜಿ ಕುಮಾರ್, ಮಹೇಶ್, ಲಾವಣ್ಯ, ಶ್ವೇತಾ, ಅನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net