ತುಮಕೂರಲ್ಲಿ ಮೂವರು ಪಾಕ್​ ಪ್ರಜೆಗಳು !

Published on

ತುಮಕೂರು: ಜಿಲ್ಲೆಯಲ್ಲಿ ಮೂವರು ಪಾಕಿಸ್ತಾನದ ಪ್ರಜೆಗಳು ನೆಲೆಸಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾಕೇಂದ್ರ ತುಮಕೂರಿನಲ್ಲೇ ಮೂವರು ಮಹಿಳೆಯರು ಪ್ರತ್ಯೇಕವಾಗಿ ವಾಸವಿದ್ದಾರೆ. ಸ್ಥಳಿಯರನ್ನು ವಿವಾಹವಾಗಿರುವ ಈ ಮಹಿಳೆಯರು ದೀರ್ಕಾಲದಿಂದ ನೆಲೆಸಿದ್ದಾರೆ. ಓರ್ವ ಮಹಿಳೆ 1962ರಲ್ಲಿ ವಿವಾಹ ಬಳಿಕ ಇಲ್ಲಿ ಬಂದು ನೆಲೆಸಿದ್ದು ಆಕೆಗೆ ಇನ್ನೂ ಭಾರತದ ಪೌರತ್ವವನ್ನು ನೀಡಲಾಗಿಲ್ಲ.

ಇನ್ನಿಬ್ಬರು ಮಹಿಳೆಯರು 10 ವರ್ಷದ ಹಿಂದೆ ಮದುವೆಯಾಗಿ ಬಂದಿದ್ದು ದೀರ್ಕಾಲೀನ ವೀಸಾ ಪಡೆದು ಇಲ್ಲಿಯೆ ಉಳಿದುಕೊಂಡಿದ್ದಾರೆ. ವಿಸಿಟಿಂಗ್​ ವೀಸಾ ಪಡೆದು ಯಾವೊಬ್ಬ ಪಾಕ್​ ಪ್ರಜೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನೆಲೆಸಿಲ್ಲವೆಂಬ ಮಾಹಿತಿ ಪೊಲೀಸ್​ ಇಲಾಖೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net