

ಉಪ್ಪಳ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಾಡಿನ ಜನತೆಯ ಆಶಯ. ದೇಶದ ಪ್ರಗತಿಯಲ್ಲಿ ನಮ್ಮ ಗ್ರಾಮದ ಕೊಡುಗೆಗಳು ಅಗತ್ಯ. ಅದಕ್ಕಾಗಿ ಬಿಜೆಪಿ ಸ್ಥಳೀಯ ವಾರ್ಡ್‌ಗಳಲ್ಲಿ ಗೆಲ್ಲಬೇಕು. ಆಗ ದೇಶದ ಪ್ರಗತಿ ವಾರ್ಡ್ ಮಟ್ಟದಲ್ಲೂ ಕಾಣಬಹುದು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಮಧು ಹೇಳಿದರು.
ಪೈವಳಿಕೆ ಪಂಚಾಯಿತಿ ಚೇರಾಲು ವಾರ್ಡ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಪಟ್ಲ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ವಾರ್ಡ್ ಸದಸ್ಯೆ ಪುಷ್ಪಲಕ್ಷ್ಮೀ, ಮಮತಾ ಮೊದಲಾದವರಿದ್ದರು. ಸದಾಶಿವ ಚೇರಾಲು ಸ್ವಾಗತಿಸಿದರು. ಗಣೇಶ ಪ್ರಸಾದ್ ನಾಯ್ಕ ವಂದಿಸಿದರು.