ದೇವರಾಯನದುರ್ಗದಲ್ಲಿ ವರ್ಣೋದಯ

Varnodaya_Arts
Published on

ತುಮಕೂರು: ಪ್ರಕೃತಿಯ ಮಡಿಲಲ್ಲಿ ಚಿತ್ರ ಕಲಾವಿದರು ಕಲಾ ಕೃತಿಗಳನ್ನು ರಚಿಸುವ ಮೂಲಕ ಜನರಲ್ಲಿ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತಿರುವುದು ವಿಶೇಷವೆನಿಸಿದೆ ಎಂದು ಕ್ಯಾತಸಂದ್ರ ಠಾಣೆ ಸಿಪಿಐ ರಾಮಪ್ರಸಾದ್ ಹೇಳಿದರು.

ತಾಲೂಕಿನ ದೇವರಾಯನದುರ್ಗದಲ್ಲಿ ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ 4 ದಿನಗಳ ಚಿತ್ರಕಲಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಶಿಬಿರಗಳಿಂದ ಚಿತ್ರಕಲೆಯತ್ತ ಜನ ಆಕರ್ಷಿತರಾಗುವುದಲ್ಲದೆ, ಜನರಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಕಲಾ ಶಿಬಿರದ ನಿರ್ದೇಶಕ, ಹಿರಿಯ ಕಲಾವಿದ ಅಶೋಕ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರನ್ನು ಇಂತಹ ಕಲಾ ಶಿಬಿರಗಳಿಗೆ ಆಹ್ವಾನಿಸಿದರೆ ಇನ್ನಷ್ಟು ಕಳೆಗಟ್ಟಲಿದೆ. ಪ್ರಕೃತಿಯ ಮಡಿಲಲ್ಲಿನ ವಿಶೇಷ ಶಿಬಿರ ಕಲಾವಿದರಲ್ಲಿನ ಭಾವನೆಗಳನ್ನು ಬಣ್ಣದಲ್ಲಿ ಕಟ್ಟಿಕೊಡಲು ಸಾಧ್ಯವಾಗಲಿದೆ ಎಂದರು.

ವರ್ಣೋದಯ ಆರ್ಟ್ ಗ್ರೂಪ್ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿದ, ಹಿರಿಯ ಮತ್ತು ಕಿರಿಯ ಕಲಾವಿದರನ್ನು ಒಂದುಗೂಡಿಸಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ. ತುಮಕೂರು ನಗರದಲ್ಲು ಈ ರೀತಿಯ ಅನೇಕ ಕಲಾ ಶಿಬಿರಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಎ.ಜಿ.ಉಮಾಮಹೇಶ್, ಹರ್ಷ ಹರಿಹಬ್ಬೆ , ಬಸವರಾಜು ಕುಂಸಿ, ಜಿ.ಅರುಣ, ಭರತ್, ಭಾನುಪ್ರಕಾಶ್, ಬಿ.ಅಚ್ಯುತಾನಂದ, ಅಚ್ಯುತನ್ ಮತ್ತಿತರರ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net