ಬಣ್ಣ ಒಣಗಿಸಿಕೊಳ್ಳಲು ಹುಲಿವೇಷಧಾರಿಗಳ ಹರಸಾಹಸ

Untitled design
ಕಂಪ್ಲಿಯ ಚಿತ್ರಗಾರ ಮನೆಯಲ್ಲಿ ಹುಲಿವೇಷಧಾರಿಗಳಿಗೆ ಬಣ್ಣ ಬಳಿಯುತ್ತಿರುವ ಕಲಾವಿದೆ ರಾಧಾಬಾಯಿ.
Published on

ಕಂಪ್ಲಿ: ಉತ್ತಮ ಮಳೆಯಿಂದ ರೈತರಿಗೆ ಸಮಾಧಾನವಾಗಿದ್ದು, ತಾಲೂಕಿನಾದ್ಯಂತ ಮೊಹರಂ ಸಂಭ್ರಮ ಹೆಚ್ಚಾಗಿದೆ. ಗುರುವಾರ ಮೊಹರಂ ಹರಕೆ ಹೊತ್ತವರು ಹುಲಿವೇಷ ಬರೆಸಿಕೊಳ್ಳುವುದಕ್ಕಾಗಿ ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನ ಬಳಿಯ ಚಿತ್ರಗಾರ ಮನೆಗೆ ಧಾವಿಸುತ್ತಿದ್ದಾರೆ.


ಮೋಡ ಕವಿದ ವಾತಾವರಣ ಮುಂದುವರೆದಿದ್ದರಿಂದ ಬಣ್ಣ ಒಣಗಿಸಿಕೊಳ್ಳಲು ಹುಲಿವೇಷಧಾರಿಗಳು ಹರಸಾಹಸ ಪಡುವಂತಾಗಿದೆ. ಹುಲಿ ಹರಕೆಯ ಸಂಪ್ರದಾಯವಿರುವವರು, ಹರಕೆ ಹೊತ್ತವರು 3, 5, 7ನೇ ದಿನಗಳ ಸವಾರಿ ದಿನಕ್ಕಾಗಿ ಹುಲಿವೇಷದ ಬಣ್ಣ ಬಳಸಿಕೊಂಡು ದೇವರಿಗೆ ಹರಕೆ ಸಲ್ಲಿಸಿದರು. ಚಿತ್ರಗಾರ ಸಮುದಾಯದ ಪ್ರಸಾದ್, ಅಜಯಕುಮಾರ್, ಸತ್ಯಭಾಮ, ಹರೀಶ್, ಶೀಲಾವತಿ, ಕಮಲಮ್ಮ, ಶಕುಂತಲ, ವಿಜಯ್, ಪಾಂಡುರಂಗ ಹರಕೆಯ ವೇಷಧಾರಿಗಳಿಗೆ ಹುಲಿ ಬಣ್ಣ ಬಳಿದರು.

ಚಿತ್ರಗಾರ ರಾಧಬಾಯಿ ಮಾತನಾಡಿ, ನಾನಾ ಗ್ರಾಮಗಳಿಂದ ಹರಕೆ ಹೊತ್ತ ಹುಲಿ ಮತ್ತು ಮರಿ ಹುಲಿಗಳು ಸೇರಿ 450ಕ್ಕೂ ಹೆಚ್ಚು ಜನ ಹುಲಿವೇಷ ಬಳಸಿಕೊಳ್ಳಲು ಬಂದಿದ್ದಾರೆ. ಬಣ್ಣದ ಬೆಲೆ ಹೆಚ್ಚಿದ್ದರಿಂದ ದೊಡ್ಡಹುಲಿಗೆ 600 ರೂ., ಮರಿ ಹುಲಿಗೆ 300 ರೂ. ಶುಲ್ಕ ಮಾಡಿದ್ದೇವೆ. ಇದೊಂದು ಕಲೆಯ ಜತೆಗೆ ಮೊಹರಂ ಸೇವೆಯಾಗಿ ಭಾವಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net