More

    ಗಮನ ಸೆಳೆಯುವ ಹುಲಿ ವೇಷಧಾರಿಗಳು

    ಲಕ್ಷ್ಮೇಶ್ವರ: ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಜನ ಸನ್ನದ್ಧರಾಗಿದ್ದಾರೆ.

    ಹಬ್ಬದ ಆಚರಣೆ ಮುನ್ನಾ ದಿನ ಎಲ್ಲೆಡೆ ಹುಲಿ ವೇಷಧಾರಿಗಳ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲಾಗುತ್ತಿದ್ದು, ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಹುಲಿ ವೇಷ ಧರಿಸಿ ಹಬ್ಬಕ್ಕೆ ಮೆರುಗು ತರುತ್ತಾರೆ. ಹಿಂದು-ಮುಸ್ಲಿಮರು ಹುಲಿ ವೇಷ ಬರೆಯಿಸಿಕೊಂಡು ಹಲಗೆ ಬಾರಿಸುತ್ತ, ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಜನರನ್ನು ಆಕರ್ಷಿಸುತ್ತಾರೆ. ಜತೆಗೆ ಕಾಣಿಕೆಯನ್ನೂ ಸ್ವೀಕರಿಸುತ್ತಾರೆ.

    ಪಟ್ಟಣ ಸೇರಿ ತಾಲೂಕಿನಾದ್ಯಂತ ಪಾಂಜಾಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಶುಕ್ರವಾರ ಕತ್ತಲರಾತ್ರಿ, ಶನಿವಾರ ಪಾಂಜಾಗಳ ಮೆರವಣಿಗೆ ನಡೆಯಲಿದೆ.

    ಪ್ರವೀಣ ಕೈ ಚಳಕ

    ಪಟ್ಟಣದ ಯುವ ಕಲಾವಿದ ಪ್ರವೀಣ ಗಾಯಕರ ಅವರು ಹುಲಿವೇಷ ಬರೆಯುವುದರಲ್ಲಿ ಸಿದ್ಧಹಸ್ತರು. ಪ್ರತಿವರ್ಷ ಪಟ್ಟಣದ ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ಜನರ ಮೈಮೇಲೆ ಆಕರ್ಷಕ ಹುಲಿಯ ಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದಾರೆ.

    ಹಬ್ಬದ ಮುನ್ನಾದಿನ ಹುಲಿವೇಷಧಾರಿಗಳಿಗೆ ಬಣ್ಣ ಬಳಿಯುವ ಕಾಯಕದಲ್ಲಿ ಮನೆಮಂದಿಯೂ ನೆರವಾಗುತ್ತಾರೆ. ಇವರ ಕಲಾ ನೈಪುಣ್ಯತೆಯಿಂದ ನೂರಾರು ಹುಲಿವೇಷಧಾರಿಗಳು ಮೊಹರಂ ಹಬ್ಬಕ್ಕೆ ಮೆರುಗು ನೀಡುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಹುಲಿವೇಷ ಬರೆಸಿಕೊಳ್ಳವವರ ಸಂಖ್ಯೆ ಕಡಿಮೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts