

ಪುತ್ತೂರು ಗ್ರಾಮಾಂತರ: ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಅನುಗ್ರಹದೊಂದಿಗೆ ಹೊರಟು ಮನೆ ಮನೆ ತಿರುಗಾಟ ಮಾಡುವ ಪಡುಮಲೆಯ ಚಿಕ್ಕಮೇಳವು ಕಲೆಯ ಬೆಳವಣಿಗೆಗೆ ಹಾಗೂ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುವಲ್ಲಿ ಪೂರಕವಾಗಲಿ ಎಂದು ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವನಹಿತ್ತಿಲು ಹೇಳಿದರು.
ಕೂವೆ ಶಾಸ್ತಾರ ವಿಷ್ಣುಮೂರ್ತಿ ಕೃಪಾಪೋಷಿತ ಸಂಚಾರಿ ಚಿಕ್ಕ ಮೇಳ ಪಡುಮಲೆಯ ಈ ವರ್ಷದ ತಿರುಗಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೃಷ್ಣ ಭಟ್ ಉಂಡೆಮನೆ, ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕ ನಿಡಿಯಡ್ಕ ಹಾಗೂ ನಿವೃತ್ತ ಮುಖ್ಯಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು ಚಾಲನೆ ನೀಡಿದರು. ಉದ್ಘಾಟನೆಗೆ ಮೊದಲು ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ದೇವರ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉದಯ ಕುಮಾರ್ ಪಡುಮಲೆ, ಗೋಪಾಲ ನಾಯ್ಕ ದೊಡ್ಡಡ್ಕ, ಮೇಳದ ವ್ಯವಸ್ಥಾಪಕ ದಾಮೋದರ ಪಾಟಾಳಿ ಶರವು, ಯಕ್ಷಗಾನ ಗುರು ಸುರೇಶ್ ಹೆಗಡೆ ಕುಳದಪಾರೆ, ಗಣೇಶ್ ಭಟ್ ಈಶಮೂಲೆ, ಕಲಾವಿದರಾದ ಉತ್ತಮ್ ಭಟ್ ಪಡ್ಪು, ಜಯರಾಮ ಕೆದಿಲಾಯ, ಸುಂದರ ನಾಯ್ಕ ಅರ್ಲಪದವು, ಪ್ರಮೋದ್ ಅರ್ಲಪದವು, ಸ್ಥಳೀಯರಾದ ಪುರಂದರ ರೈ ಸೇನೆರಮಜಲು, ಗಿರೀಶ್ ಕನ್ನಡ್ಕ, ಕುಶಾಲಪ್ಪ ನಾಯ್ಕ ದೊಡ್ಡಡ್ಕ ಮತ್ತಿತರರಿದ್ದರು. ಶಿಕ್ಷಕ ಚಂದ್ರಶೇಖರ ಸುಳ್ಯಪದವು ವಂದಿಸಿದರು.