ಡಾ.ಕಯ್ಯಾರ ಬದುಕು, ಬರಹ ದಾಖಲೀಕರಣ ಶ್ಲಾಘನೀಯ: ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಮೆಚ್ಚುಗೆ

New Project (15)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಡಾ.ಕಯ್ಯಾರ ಅವರ ಬದುಕು, ಸಾಹಿತ್ಯ ಮತ್ತು ಹೋರಾಟವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮಹತ್ವಪೂರ್ಣವಾದ ಮಹಾಪ್ರಬಂಧ ಮಂಡಿಸಿ, ಕಾಸರಗೋಡಿನ ಹಿರಿಯ ಸಾಹಿತಿ ಮತ್ತು ಹೋರಾಟದ ಸಂಕಥನವನ್ನು ಡಾ.ಪೆರ್ಲ ತಮ್ಮ ಪ್ರಬಂಧದಲ್ಲಿ ದಾಖಲಿಸಿಕೊಂಡಿರುವುದು ಶ್ಲಾಘನೀಯ ಎಂದು ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಹೇಳಿದರು.

ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನ ಪ್ರಕಾಶನ ಸಂಸ್ಥೆಯಿಂದ ನಾಡೋಜ ಡಾ.ಕಯ್ಯಾರ ಕಿಞ್ಣಣ್ಣ ರೈ ಜನ್ಮದಿನೋತ್ಸವ ಪ್ರಯುಕ್ತ ಕನ್ನಡ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಾಡೋಜ ಡಾ.ಕಯ್ಯಾರ ಪ್ರಶಸ್ತಿಯನ್ನು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಅವರಿಗೆ ಪ್ರದಾನಿಸಿ ಮಾತನಾಡಿದರು.

ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್ ಮಾತನಾಡಿ, ಈ ಬಾರಿ ಕನ್ನಡಕ್ಕಾಗಿ ಮತ್ತು ಮಾಧ್ಯಮ ರಂಗದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ಸಮಿತಿ ಪ್ರಶಸ್ತಿ ನೀಡಿದೆ. ಗಡಿನಾಡ ಕನ್ನಡಿಗನಾಗಿ ಡಾ.ಪೆರ್ಲ ಅವರ ಸಾಹಿತ್ಯದ ಕೆಲಸ ಸ್ತುತ್ಯರ್ಹ ಎಂದರು.

ಕನ್ನಡ ಭವನದ ಕೋಶಾಧಿಕಾರಿ ಸಂಧ್ಯಾರಾಣಿ ಉಪಸ್ಥಿತರಿದ್ದರು. ಎಡನೀರು ಸ್ವಾಮೀಜಿಸ್ ಪ್ರೌಢಶಾಲೆಯ ಉಪನ್ಯಾಸಕ ಪ್ರವೀಣ್ ರೈ ವಂದಿಸಿದರು.

ಹತ್ತೂರಲ್ಲಿ ಪಡೆಯುವ ಸನ್ಮಾನಕ್ಕಿಂತ ಹುಟ್ಟೂರಿನಲ್ಲಿ ಅದರಲ್ಲೂ ಮುಖ್ಯವಾಗಿ ಕನ್ನಡ ನಾಡು ನುಡಿಗಾಗಿ ಜೀವನ ಪರ್ಯಂತ ತಪಸ್ಸಿನಂತೆ ದುಡಿದ ಶ್ರೇಷ್ಠ ಕನ್ನಡದ ಕಟ್ಟಾಳು ನಾಡೋಜ ಡಾ.ಕಯ್ಯಾರರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆದಿರುವುದು ಜೀವನದ ದೊಡ್ಡ ಭಾಗ್ಯ. ಡಾ.ಸದಾನಂದ ಪೆರ್ಲ ಆಕಾಶವಾಣಿಯ ನಿವೃತ್ತ ಅಧಿಕಾರಿ https://www.vijayavani.net/tree-falls-on-road-in-kadenkodi https://www.vijayavani.net/heavy-rain-in-sulya-taluk

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net