ಹೃದ್ರೋಗದಿಂದ ಬಳಲುತ್ತಿದ್ದಾರೆ ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ; ಹಠಕ್ಕೆ ಮಣಿದು ಆಕ್ಸಿಜನ್ ಸೆಟಪ್ ಸಹಿತ ಮನೆಗೆ ಕಳಿಸಿದ ವೈದ್ಯರು

Sukri
Published on

ಉತ್ತರ ಕನ್ನಡ: ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ಅವರು ಹೃದ್ರೋಗದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತೀವ್ರ ಅನಾರೋಗ್ಯವಿದ್ದರೂ ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂಬ ಅವರ ಹಠಕ್ಕೆ ಮಣಿದು ವೈದ್ಯರು ಅವರನ್ನು ಆಕ್ಸಿಜನ್​ ಸೆಟಪ್​ ಸಹಿತ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಶ್ವಾಸಕೋಶ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮಗೌಡ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ದೀಪಾವಳಿ ಪ್ರಯುಕ್ತ ಮನೆಗೆ ಹೋಗಬೇಕು ಎಂದು ಪಟ್ಟುಹಿಡಿದಿದ್ದರು.

ಮನವೊಲಿಸಲು ಯತ್ನಿಸಿದರೂ ಮಣಿಯದ ಅವರನ್ನು ಕೊನೆಗೆ ಅವರ ಉಸಿರಾಟಕ್ಕೆ ಅಳವಡಿಸಲಾಗಿರುವ ಆಕ್ಸಿಜನ್​ ಸೆಟಪ್​ ಸಹಿತ ಮನೆಗೆ ಕಳುಹಿಸಿಕೊಡಲಾಗಿದೆ. ಸದ್ಯ ಅವರು ಅಂಕೋಲಾದ ಬಡಿಗೇರಿಯಲ್ಲಿ ಇರುವ ತಮ್ಮ ಮನೆಗೆ ತಲುಪಿದ್ದು, ಸಹಜ ಉಸಿರಾಟಕ್ಕೆ ಪೂರಕವಾಗಿ ಆಕ್ಸಿಜನ್​ ಸೆಟಪ್​ ಸಹಾಯದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net