ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

padmashree
ರಾಷ್ಟ್ರಪತಿ ದ್ರೌಪದಿ ಮುರ್ಮು ಸತ್ಯನಾರಾಯಣ ಬೆಳೇರಿಗೆ ಗುರುವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.
Published on

ಕಾಸರಗೋಡು: ಸಾಂಪ್ರದಾಯಿಕ ಭತ್ತದ ತಳಿಗಳ ಅನನ್ಯ ಸಂಗ್ರಾಹಕ, ಗಡಿನಾಡು ಕಾಸರಗೋಡಿನ ಅನರ್ಘ್ಯ ಕೃಷಿ ಸಾಧಕ ಸತ್ಯನಾರಾಯಣ ಬೆಳೇರಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸತ್ಯನಾರಾಯಣ ಬೆಳೇರಿ ಅವರ ಜತೆ ಬಾಂಬೆ ಸಮಾಚಾರ ಪತ್ರಿಕೆ ಮಾಲೀಕ ಹಾರ್ಮುಸ್ಜಿ ಎನ್.ಕಾಮಾ, ಬಿಜೆಪಿ ನಾಯಕ ಒ.ರಾಜಗೋಪಾಲ್, ಲಡಾಖ್‌ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೋಚೆ, ತಮಿಳು ನಟ ದಿ.ಕ್ಯಾಪ್ಟನ್ ವಿಜಯಕಾಂತ್, ಗುಜರಾತಿ ಪತ್ರಿಕೆ ಜನ್ಮಭೂಮಿಯ ಸಿಇಒ ಕುಂದನ್ ವ್ಯಾಸ್, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ತೆಲುಗು ನಟ ಕೊನಿಡೆಲಾ ಚಿರಂಜೀವಿ, ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ.ಫಾತಿಮಾ ಬೀವಿ ಪ್ರಶಸ್ತಿ ಸ್ವೀಕರಿಸಿದರು. ಸತ್ಯನಾರಾಯಣ ಬೆಳೇರಿ ನೆಟ್ಟಣಿಗೆ ಸಮೀಪದ ಬೆಳೇರಿ ನಿವಾಸಿ. 600ಕ್ಕಿಂತಲೂ ಹೆಚ್ಚು ಭತ್ತದ ಸಾಂಪ್ರದಾಯಿಕ ತಳಿಗಳನ್ನು ಸಂಗ್ರಹಿಸಿ, ಸಂರಕ್ಷಿಸುವಲ್ಲಿ ವಿಶೇಷ ಕೊಡುಗೆ ನೀಡಿರುವುದನ್ನು ಪರಿಗಣಿಸಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net