ಕೈಕಂಬ, ಅಡ್ಡೂರಿನಲ್ಲಿ ಪದ್ಮರಾಜ್ ರೋಡ್ ಶೋ

padmaraj
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಗುರುಪುರ ಕೈಕಂಬ, ಅಡ್ಡೂರು, ಉಳಾಯಿಬೆಟ್ಟು, ಕುಪ್ಪೆಪದವು, ಎಡಪದವು ಪ್ರದೇಶದಲ್ಲಿ ಸೋಮವಾರ ಸಂಜೆ ಬೃಹತ್ ರೋಡ್ ಶೋ ನಡೆಸಿ, ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಹರೀಶ್ ಕುಮಾರ್, ಸುರೇಂದ್ರ ಕಂಬಳಿ, ಇನಾಯತ್ ಅಲಿ ಮೊದಲಾದವರು ಜೊತೆಗಿದ್ದರು.
Published on

ಗುರುಪುರ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಸೋಮವಾರ ಸಂಜೆ ಗುರುಪುರ ಕೈಕಂಬ, ಅಡ್ಡೂರು, ಉಳಾಯಿಬೆಟ್ಟು, ಕುಪ್ಪೆಪದವು, ಎಡಪದವು ಪ್ರದೇಶದಲ್ಲಿ ಬೃಹತ್ ರೋಡ್ ಶೋ ನಡೆಸಿ, ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾತನಾಡಿ, ಕೇಂದ್ರದ ಬಿಜೆಪಿ ಆಡಳಿತವು ಬಡವರ ವಿರೋಧವಾಗಿದ್ದು, ದೇಶದ ಪ್ರಗತಿಗೆ ಮಾರಕವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಉದ್ಯೋಗಾವಕಾಶ, ಪ್ರವಾಸೋದ್ಯಮ, ಶಿಕ್ಷಣ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಜಿಲ್ಲೆಯ ಯುವಜನರಿಗೆ ಹೊರ ಜಿಲ್ಲೆ, ಹೊರ ರಾಜ್ಯ ಅಥವಾ ವಿದೇಶಗಳ ಬದಲಾಗಿ ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

padmaraj 2

ರೋಡ್ ಶೋದಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಸುರೇಂದ್ರ ಕಂಬಳಿ, ಇನಾಯತ್ ಅಲಿ ಮೂಲ್ಕಿ, ಮೆಲ್ವಿನ್ ಡಿ’ಸೋಜ, ಜಯಲಕ್ಷ್ಮೀ, ಗಣೇಶ್ ಗಂಜಿಮಠ, ಪೃಥ್ವೀರಾಜ್ ಆರ್.ಕೆ., ಪದ್ಮನಾಭ ಕೋಟ್ಯಾನ್ (ಬಿಎಲ್‌ಪಿ), ಯು.ಪಿ. ಇಬ್ರಾಹಿಂ, ಎ.ಕೆ. ಅಶ್ರ್, ಸುನೀಲ್ ಗಂಜಿಮಠ, ಪುರುಷೋತ್ತಮ ಮಲ್ಲಿ, ಯಶವಂತ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಬೂಬ ಪೂಜಾರಿ, ಬಾಷಾ ಮಾಸ್ಟರ್, ಬಾಷಾ ಬಂಗ್ಲೆಗುಡ್ಡೆ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net