ಕಾಮಗಾರಿ ಹಂತದ ಸೇತುವೆ ಕುಸಿತ - 7 ಮಂದಿಗೆ ಗಾಯ

IMG-20240415-WA0011
Published on

ವಿಟ್ಲ: ಪುಣಚ ಗ್ರಾಮದ ಬರೆಂಜ - ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತು ಕುಸಿತವಾಗಿ 7ಮಂದಿಗೆ ಗಾಯವಾಗಿದೆ.

ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಗ್ರಿಂಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ರಾಡ್ ಜಾರಿದ ಹಿನ್ನಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಗ್ರೀಟ್ ವ್ಯವಸ್ಥೆ ಕುಸಿತವಾಗಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿಯನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದಾರೆ. ಸ್ಥಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net