

ಬೆಳ್ತಂಗಡಿ: ತಾಲೂಕಿನ ನಾರಾವಿಯಲ್ಲಿ ಭತ್ತ ನಾಟಿ, ಯಂತ್ರಶ್ರೀ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧ.ಗ್ರಾ ಯೋಜನೆಯ ಯಂತ್ರ ಬ್ಯಾಂಕ್ ಮ್ಯಾನೇಜರ್ ಉಮೇಶ್ ಮಾತನಾಡಿ, ಯೋಜನೆಯು ಭತ್ತ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಿಎಚ್‌ಎಸ್‌ಸಿ ಕೇಂದ್ರದಲ್ಲಿ ಭತ್ತ ಕೃಷಿಗೆ ಯೋಗ್ಯ ಉಳುಮೆಗೆ, ನಾಟಿ, ಕಟಾವಿಗೆ ಕಡಿಮೆ ಬಾಡಿಗೆ ದರದಲ್ಲಿ ಮಷಿನ್ ಲಭ್ಯವಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬಹುದು. ಯೋಜನೆಯಿಂದ ತರಬೇತಿ ಪಡೆದ ಪ್ರಶಾಂತ್ ಚಿತ್ತಾರ ಅವರು ಕೇಂದ್ರೀಕೃತ ನರ್ಸರಿ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಸಸಿ ಮಡಿ ನೀಡುತ್ತಿದ್ದಾರೆ. ಇದರ ಪ್ರಯೋಜನ ರೈತರು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಕೃಷಿ ಮಾಡಬೇಕು ಎಂದರು.
ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ, ಹಾಲು ಉತ್ಪಾದಕ ಸಂಘದ ನಿರ್ದೇಶಕ ಸುಮನ್ ಹೆಗ್ಡೆ, ಸುಧಾಕರ್ ಪೂಜಾರಿ, ಯಂತ್ರಶ್ರೀ ಯೋಧ ಪ್ರಶಾಂತ್, ಧರಣೆಪ್ಪ ಪೂಜಾರಿ, ಅಣ್ಣಿ ಪೂಜಾರಿ, ಕೇಶವ ಪೂಜಾರಿ, ನೀಲಯ್ಯ, ಸುಮಿತ್ರಾ, ಕಮಲಾಕ್ಷಿ, ಈರಮ್ಮ, ಸುಶೀಲ, ಚಂದ್ರಪ್ಪ, ಯಶೋದಾ, ವಶಾಂತಿ, ಯಂತ್ರ ಚಾಲಕ ಪುರಂದರ ಮುಂತಾದವರು ಉಪಸ್ಥಿತರಿದ್ದರು.