ಪಾದರಾಯನಪುರ ಗಲಭೆ ಪ್ರಕರಣ: ಆರೋಪಿಗಳಲ್ಲಿ ಮತ್ತೆ ಮೂವರಿಗೆ ಕರೊನಾ ಸೋಂಕು ಧೃಡ

Padarayapura
Published on

ರಾಮನಗರ: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಮನಗರ ಜೈಲಿನಲ್ಲಿಗೆ ಸ್ಥಳಾಂತರ ಮಾಡಲಾಗಿದ್ದ ಆರೋಪಿಗಳಲ್ಲಿ ಮತ್ತೆ ಮೂವರಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಇದೀಗ ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ಮರಳಿ ಕರೆತರುತ್ತಿರುವುದರಿಂದ ನಗರದಲ್ಲೂ ಆತಂಕ ಮನೆ ಮಾಡಿದೆ.

ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿದ್ದವರಲ್ಲಿ ಮೂವರ ವರದಿ ಕರೊನಾ ಪಾಸಿಟಿವ್​ ಬಂದಿದೆ. ಹೀಗಾಗಿ ಅವರನ್ನು ರಾಮನಗರದಿಂದ ಆ್ಯಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.

ಒಟ್ಟು 121 ಆರೋಪಿಗಳಲ್ಲಿ 5 ಮಂದಿಗೆ ಕರೊನಾ ಸೋಂಕು ಧೃಡವಾಗಿದೆ. ಗುರುವಾರ ರಾತ್ರಿಯೇ ಇಬ್ಬರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಮತ್ತೆ ಮೂವರನ್ನು ಸ್ಥಳಾಂತರಿಸಿದ್ದು, ಬಾಕಿ 116 ಮಂದಿಯನ್ನು ಸಾರಿಗೆ ಬಸ್​ನಲ್ಲಿ ಸ್ಥಳಾಂತರ ಮಾಡಲಾಗುತ್ತದೆ.

ಈ ಮಧ್ಯೆ ಪಾದರಾಯನಪುರ ಪುಂಡರನ್ನು ರಾಮನಗರಕ್ಕೆ ಸ್ಥಳಾಂತರಿಸಿದ್ದಕ್ಕೆ ಮಾಜಿ ಸಿಎಂ ಎಚ್​ಡಿಕೆ, ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಮೊದಲೇ ಗ್ರೀನ್​ಝೋನ್​ನಲ್ಲಿದ್ದ ರಾಮನಗರದಲ್ಲೂ ಸಹ ಇದೀಗ ಕರೊನಾ ಆತಂಕ ಮನೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net