ಇಮ್ರಾನ್ ಪಾಷಾ ಪೊಲೀಸ್ ವಶಕ್ಕೆ

Padarayanapura Corporator Imran Pasha 10 JUN 20
Published on

ಬೆಂಗಳೂರು: ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಹಾಗೂ ಆತನ 22 ಬೆಂಬಲಿಗರನ್ನು ಜಗಜೀವನ್​ರಾಮ್ ನಗರ ಪೊಲೀಸರು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಸೋಮವಾರ ವಿಡಿಯೋ ಗೋಷ್ಠಿ ಮೂಲಕ ಇಮ್ರಾನ್ ಪಾಷಾ ಹಾಗೂ ಇತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಮತ್ತೆ ತಮ್ಮ ವಶಕ್ಕೆ ನೀಡುವಂತೆ ಮನವಿಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ 3 ದಿನ ಆರೋಪಿಗಳನ್ನು ಪೊಲೀಸರ ವಶಕ್ಕೆನೀಡಿದ್ದಾರೆ.

ಆರೋಪಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಮ್ರಾನ್ ಪಾಷಾಗೆ ಈ ಹಿಂದೆಯೇ ಕರೊನಾ ನೆಗೆಟಿವ್ ಬಂದಿದ್ದು, ಪೊಲೀಸ್ ವಶದಲ್ಲಿರುವ ಆತನ ಬೆಂಬಲಿಗರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಕರೊನಾ ಪಾಸಿಟಿವ್ ಇದ್ದರೆ ಆಸ್ಪತ್ರೆಗೆ ದಾಖಲಿಸಲಾಗುವುದು, ನೆಗೆಟಿವ್ ಬಂದರೆ ಸೂಕ್ತ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲ ಆಯಾಮಗಳಲ್ಲೂ ತನಿಖೆ: ಕರೊನಾ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಮೆರವಣಿಗೆ ಆಯೋಜಿಸಿರುವುದು ಯಾರು?, ಪಾಷಾ ಅವರೇ ಬೆಂಬಲಿಗರಿಗೆ ಸೂಚಿಸಿದ್ದರೆ ಎಂಬುದು ಸೇರಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net