More

    ಜಡ್ಜ್​ಗಳ ವಸತಿಗೃಹದಲ್ಲಿ ಕಳವು

    ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳಿಗಾಗಿ ಸ್ಯಾಂಕಿ ರಸ್ತೆಯಲ್ಲಿ ಕಾಯ್ದಿರಿಸಲಾಗಿರುವ ಸರ್ಕಾರಿ ವಸತಿ ಗೃಹದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, 45 ಸಾವಿರ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

    ಕಟ್ಟಡಗಳ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಸ್ಯಾಂಕಿ ರಸ್ತೆಯಲ್ಲಿರುವ ಸರ್ಕಾರಿ ವಸತಿ ಗೃಹ-29 ಅನ್ನು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯ ಮೂರ್ತಿಗಳಿಗಾಗಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಯಾರಿಗೂ ಹಂಚಿಕೆಯಾಗದೆ ಖಾಲಿ ಉಳಿದಿದೆ. ಅತಿ ಗಣ್ಯ ವ್ಯಕ್ತಿಗಳ ನಿವಾಸ ಆಗಿರುವುದರಿಂದ ಕಾಲಕಾಲಕ್ಕೆ ಸ್ವಚ್ಚಗೊಳಿಸಿ ಕಟ್ಟಡ ಸುಸ್ಥಿತಿಯಲ್ಲಿಡಲಾಗುತ್ತಿದೆ. ಲೋಕೋಪಯೋಗಿ ಗುತ್ತಿಗೆದಾರರು ಮೂರು ದಿನಗಳಿಗೊಮ್ಮೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು.

    ಇದನ್ನೂ ಓದಿ: ನಸುಕಿನ 3ಕ್ಕೆ ನಿದ್ದೆಯಲ್ಲಿದ್ದ ಪತ್ನಿಯ ಕತ್ತನ್ನೆ ಕುಯ್ದ- ಬೆಳಗ್ಗೆ 6ಕ್ಕೆ ಪತಿಯ ನಾಟಕ: ಅನಾಥವಾಯಿತು ಮಗು!

    ಜೂ.6ರ ಮಧ್ಯಾಹ್ನ 12 ಗಂಟೆಗೆ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು. ಜೂ. 8ರ ಬೆಳಗ್ಗೆ ಸಿಬ್ಬಂದಿ ಸ್ವಚ್ಛತೆಗೆ ತೆರಳಿದ ಸಮಯದಲ್ಲಿ ವಸತಿ ಗೃಹದ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಪ್ಲಂಬಿಂಗ್ ವಸ್ತುಗಳು, ನೀರೆತ್ತುವ 3 ಮೋಟಾರು ಪಂಪ್​ಗಳು, ಎಲ್​ಇಡಿ ಟಿವಿ ಸೇರಿ 45 ಸಾವಿರ ರೂ. ಮೌಲ್ಯದ ವಸ್ತುಗಳು ಕಳವಾಗಿವೆ. ಕಟ್ಟಡಗಳ ಉಪವಿಭಾಗದ ಇಂಜಿನಿಯರ್ ಆಸಿಫುಲ್ಲಾ ಷರೀಫ್ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

    ಆಹಾರದ ಕೊರತೆ ಜಾಗತಿಕವಾಗಿ ಕಾಡಲಿದೆ- ವಿಶ್ವಸಂಸ್ಥೆ ನೀಡಿದೆ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts