More

    ನುಡಿದಂತೆ ನಡೆದ ಶರಣೆ ಸತ್ಯಕ್ಕ

    ವಿಜಯಪುರ: ಬಸವಾದಿ ಶರಣರು ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿದವರು. ಅಂತಹ ಶ್ರೇಷ್ಠ ಶರಣರಲ್ಲಿ ವಚನಕಾರ್ತಿ ಶರಣೆ ಸತ್ಯಕ್ಕ ನಮಗೆಲ್ಲಾ ಶರಣ ಮಾರ್ಗದಲ್ಲಿ ನಡೆಯುವುದು ಕಲಿಸುವ ಮೂಲಕ ಜೀವನಕ್ಕೆ ಅಮೃತ ನೀಡಿದವರು ಎಂದು ಡಾ. ಸೋಮಶೇಖರ ವಾಲಿ ಹೇಳಿದರು.

    ನಗರದ ವೀರಶೈವ ಸಭಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಸೋಮವಾರ ನಡೆದ ಶಿವಾನುಭವ ಗೋಷ್ಠಿಯಲ್ಲಿ ವಚನಕಾರ್ತಿ ಶರಣೆ ಸತ್ಯಕ್ಕನವರ ಅನುಭಾವ ಕುರಿತು ಅವರು ಮಾತನಾಡಿದರು.

    ಶರಣೆ ಸತ್ಯಕ್ಕ ಬಸವಾದಿ ಶರಣರ ಪರಂಪರೆಯಲ್ಲಿಯೇ ಸಾರ್ಥಕ ಬದುಕಿ ಬಾಳಿದವರು. ‘ಶಂಭು ಜಗ್ಗೇಶ್ವರ’ ಕಾವ್ಯನಾಮದಿಂದ ರಚಿಸಿದ 29 ವಚನಗಳನ್ನು ಅವರು ರಚಿಸಿದ್ದು, ಅವೆಲ್ಲ ಅಕ್ಕಮಹಾದೇವಿ ಮತ್ತು ಶಿವನ ಕುರಿತಾಗಿವೆ. ಶರಣೆ ಸತ್ಯಕ್ಕ ನುಡಿದಂತೆ ನಡೆದು ಇತಿಹಾಸ ಪರಂಪರೆಯಲ್ಲಿಯೇ ಪರಿಪೂರ್ಣತೆ ಸಾಧಿಸಿದವರು. ಅವರ ವಚನಗಳು ಅಮೃತ ನುಡಿಯಂತಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಜೆ. ನಾಡಗೌಡರ ಮಾತನಾಡಿ, ನಮ್ಮ ನಡೆ-ನುಡಿ ಇನ್ನೊಬ್ಬರಿಗೆ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಶರಣರ ಚಿಂತನೆಗಳನ್ನು ಕೇಳಿ ನಮ್ಮಲ್ಲಿನ ನ್ಯೂನ್ಯತೆ ಹೋಗಲಾಡಿಸಿ ಬದುಕಿಗೆ ಬೇಕಾದ ಆದರ್ಶ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

    ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಬಸವರಾಜ ಒಂಟಗೂಡಿ, ಡಾ. ವಿ.ಡಿ. ಐಹೊಳ್ಳಿ, ವಿದ್ಯಾವತಿ ಅಂಕಲಗಿ, ಎಸ್.ವೈ. ಗದಗ, ಶಿವಪುತ್ರ ಪೋಳ, ಎಂ.ಜಿ. ಯಾದವಾಡ, ಎಂ.ಎಂ. ಅವರಾದಿ, ಶರಣಗೌಡ ಪಾಟೀಲ, ವಿಠಲ ತೇಲಿ, ಮಹಾದೇವ ಹಾಲಳ್ಳಿ, ಸುವರ್ಣಾ ಕುರ್ಲೆ, ಪರಶುರಾಮ ಪೋಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts