More

    ಧೋನಿ-ರೋಹಿತ್​-ಕೊಹ್ಲಿ ಕೈಯಲ್ಲಿ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ ಶ್ರೇಯಸ್​ ಅಯ್ಯರ್

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 17ನೇ ಆವೃತ್ತಿಯ ಮೊದಲ ಐಪಿಎಲ್​ ಕ್ವಾಪಿಫಯರ್ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಸನ್​ರೈಸರ್ಸ್​ ಹೈದರಾಬಾದ್​ ಎದುರು ಕೋಲ್ಕತ ನೈಟ್​ರೈಡರ್ಸ್​ ಗೆದ್ದು ಫೈನಲ್​ ಪ್ರವೇಶಿಸಿದೆ. ಈ ಮೂಲಕ ಕೆಕೆಆರ್​ ಒಟ್ಟಾರೆಯಾಗಿ ನಾಲ್ಕನೇ ಬಾರಿ ಫೈನಲ್​ ಪ್ರವೇಶಿಸಿದಂತಾಗುತ್ತದೆ.

    ಇನ್ನೂ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಎಸ್​​ಆರ್​ಎಚ್​ ರಾಹುಲ್​ ತ್ರಿಪಾಠಿ (55 ರನ್, 35 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಫಲವಾಗಿ 19.3 ಓವರ್​ಗಳಲ್ಲಿ 159 ರನ್​ಗಳಿಗೆ ಆಲೌಟ್​ ಆಗಿದೆ. 160 ರನ್​ಗಳ ಗುರಿ ಬೆನ್ನತ್ತಿದ್ದ ಕೋಲ್ಕತ ನೈಟ್​ರೈಡರ್ಸ್​ ತಂಡವು ಣಾಯಕ ಶ್ರೇಯಸ್​ ಅಯ್ಯರ್​ (58 ರನ್​, 24 ಎಸೆತ, 5 ಬೌಂಡರಿ, 4 ಸಿಕ್ಸರ್), ವೆಂಕಟೇಶ್​ ಅಯ್ಯರ್ (51 ರನ್, 28 ಎಸೆತ, 5 ಬೌಂಟರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 2 ವಿಕೆಟ್​ ನಷ್ಟಕ್ಕೆ ಗುರಿಯನ್ನು 13.4 ಓವರ್​ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತ್ತು ಮತ್ತು ಫೈನಲ್​ ಪ್ರವೇಶಿಸಿತ್ತು.

    ಇನ್ನೂ ಕೆಕೆಆರ್​ ತಂಡವನ್ನು ಗೆಲ್ಲಿಸಿ ಫೈನಲ್​ ಪ್ರವೇಶಿಸುವ ಮೂಲಕ ಶ್ರೇಯಸ್​ ಅಯ್ಯರ್​ ಐಪಿಎಲ್​ನಲ್ಲಿ ಹೊಸ ಸಾಧನೆಯನ್ನು ಮಾಡಿದ್ದಾರೆ. ಅದು ಕೂಡ ಎಂ.ಎಸ್. ಧೋನಿ, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅವರ ಕೈಯಲ್ಲಿ ಸಾಧ್ಯವಾಗದ ದಾಖಲೆಯನ್ನು ಶ್ರೇಯಸ್​ ಅಯ್ಯರ್​ ತಮ್ಮದಾಗಿಸಿಕೊಂಡಿದ್ದಾರೆ.

    Shreyas Iyer

    ಇದನ್ನೂ ಓದಿ: ಮೇ 26ರಂದು ನಾವು ಫೈನಲ್​ ಆಡಬೇಕಷ್ಟೇ; ಐಪಿಎಲ್​ ಆರಂಭಕ್ಕೂ ಮುನ್ನ ಗೌತಮ್​ ಗಂಭೀರ್​ ಆಡಿದ ಮಾತುಗಳು ವೈರಲ್​

    ಐಪಿಎಲ್​ ಇತಿಹಾಸದಲ್ಲಿ ಎರಡು ವಿಭಿನ್ನ ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಅಪರೂಪದ ದಾಖಲೆಯನ್ನು ಶ್ರೇಯಸ್ ಅಯ್ಯರ್ ತಮ್ಮದಾಗಿಸಿಕೊಂಡಿದ್ದಾರೆ. ಶ್ರೇಯಸ್​  ತಮ್ಮ ನಾಯಕತ್ವದಲ್ಲಿ ಐಪಿಎಲ್ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಫೈನಲ್‌ಗೆ ಮುನ್ನಡೆಸಿದರು. 2024ರಲ್ಲಿ ಕೆಕೆಆರ್​ ತಂಡವನ್ನು ತಮ್ಮ ನಾಯಕತ್ವದ ಅಡಿಯಲ್ಲಿ ಫೈನಲ್​ಗೆ ಮುನ್ನಡೆಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ವಿಭಿನ್ನ ತಂಡಗಳನ್ನು ಫೈನಲ್‌ನಲ್ಲಿ ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದಲ್ಲದೆ ಶ್ರೇಯಸ್ ಅಯ್ಯರ್ ಮತ್ತೊಂದು ದಾಖಲೆ ಹೊಂದಿದ್ದಾರೆ. ಶ್ರೇಯಸ್ ಅಯ್ಯರ್ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿ, ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಮಾತ್ರ ತಲಾ ಎರಡು ಅರ್ಧಶತಕಗಳನ್ನು ಗಳಿಸಿದರು. ಇತ್ತೀಚೆಗೆ ಶ್ರೇಯಸ್ ಅಯ್ಯರ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೇಯಸ್ ಅಯ್ಯರ್ 6 ಪ್ಲೇಆಫ್​ ಪಂದ್ಯಗಳಲ್ಲಿ  2 ಅರ್ಧಶತಕಗಳನ್ನು ಗಳಿಸುವ ಮೂಲಕ ಧೋನಿ, ರೋಹಿತ್​, ವಾರ್ನರ್​ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts