ಪದಾಳ ದೇವಾಲಯ ಹೊರೆಕಾಣಿಕೆ ಸಮರ್ಪಣೆ : ಬ್ರಹ್ಮಕಲಶೋತ್ಸವ ಸಂಭ್ರಮ ದೈವಗಳಿಗೆ ಬೆಳ್ಳಿ ಕವಚ, ಸ್ವರ್ಣ ನೇತ್ರ, ಪಲ್ಲಕ್ಕಿ ಸಮರ್ಪಣೆ

New Project (17)
Published on

ಉಪ್ಪಿನಂಗಡಿ: ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಡಿ.18ರಿಂದ 23ರವರೆಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಿಮಿತ್ತ ಬುಧವಾರದಂದು ಸಹಸ್ರಾರು ಭಕ್ತರಿಂದ ಹೊರೆಕಾಣಿಕೆ ಭವ್ಯ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಸಮರ್ಪಿಸಲ್ಪಟ್ಟಿತ್ತು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಟ ಹೊರೆಕಾಣಿಕೆ ಮೆರವಣಿಗೆ ಜತೆಗೆ ಶ್ರೀ ದೇವರಿಗೆ ಭಕ್ತಾದಿಗಳಿಂದ ನಿರ್ಮಿಸಿ ಕೊಡಲಾದ ಬೆಳ್ಳಿ ಕವಚ, ಸ್ವರ್ಣ ನೇತ್ರ ಹಾಗೂ ದೈವಗಳಿಗೆ ಪಲ್ಲಕ್ಕಿ, ಮೊಗಗಳ ಸಮರ್ಪಣಾ ಮೆರವಣಿಗೆ ನಡೆಯಿತು. ಬಳಿಕ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನೆರವೇರಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಣಿಕ್ಕಳ ಜಗದೀಶ್ ರಾವ್, ಆಡಳಿತ ಮಂಡಳಿ ಅಧ್ಯಕ್ಷ ನಡುಸಾರ ಉದಯಶಂಕರ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಚಂದಪ್ಪ ಮೂಲ್ಯ, ಡಾ.ರಾಜಾರಾಮ ಕೆ.ಬಿ, ಪ್ರತಾಪ್ ಪೆರಿಯಡ್ಕ, ಉಷಾಚಂದ್ರ ಮುಳಿಯ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನೈಾಕ್, ಸದಸ್ಯರಾದ ದೇವಿದಾಸ ರೈ, ವೆಂಕಪ್ಪ ಪೂಜಾರಿ, ಡಾ.ರಮ್ಯಾ ರಾಜಾರಾಮ್, ಪ್ರಮುಖರಾದ ಸುರೇಶ್ ಅತ್ರಮಜಲು, ಎನ್.ಜಯಗೋವಿಂದ ಶರ್ಮ, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಮಣಿಯಾಣಿ, ಲಕ್ಷ್ಮಣ ಗೌಡ ನೆಡ್ಚಿಲ್, ಸುರೇಶ್ ಗೌಂಡತ್ತಿಗೆ, ಶಾಂಭವಿ ರೈ, ಲೋಕೇಶ್ ಪೂಜಾರಿ, ರಾಧಾಕೃಷ್ಣ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಧರ್ಣಪ್ಪ ನಾಯ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುಜಾತಕೃಷ್ಣ ಆಚಾರ್ಯ, ಸುನಿಲ್ ದಡ್ಡು, ಜಯಂತ ಪೊರೋಳಿ, ಜಯಂತಿ ರಂಗಾಜೆ, ಶ್ರೀಲತಾ ಪೆರಿಯಡ್ಕ, ವನಿತಾ ಕುಕ್ಕುಜೆ, ವಿಜಯ ಶಿಲ್ಪಿ, ಕೇಶವ ಗೌಡ ರಂಗಾಜೆ, ಬಿ.ಶಂಕರ ನಾರಾಯಣ ಭಟ್, ಅವನೀಶ್ ಪೆರಿಯಡ್ಕ, ಸದಾನಂದ ಶೆಟ್ಟಿ, ಜತ್ತಪ್ಪ ನಾಯ್ಕ, ಹರೀಶ್ವರ ಮೊಗ್ರಾಲ್ ಮೊದಲಾದ ಪ್ರಮುಖರು ಇದ್ದರು.

ಇಂದು ದಿನಪೂರ್ತಿ ಭಜನೆ

19ರಂದು ಕ್ಷೇತ್ರದಲ್ಲಿ ಮುಂಜಾನೆ ಉಷಾಃಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ ಚತುಃಶುದ್ಧಿ, ಧಾರೆ, ಅವಗಾಹ ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳ ಶುದ್ಧಿ, ಪ್ರೋಕ್ಷ ಹೋಮ, ಸ್ಕಂದ ಪ್ರಾಯಶ್ಚಿತ ಹೋಮ ಜರುಗಲಿರುವುದು. ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರುಗಲಿರುವುದು. ಸಂಧ್ಯಾ ಕಾಲ ದೀಪಾರಾಧನೆ, ಅಂಕುರಪೂಜೆ, ಕುಂಡ ಶುದ್ದಿ, ದುರ್ಗಾಪೂಜೆ, ಮಹಾಪೂಜೆ ಪ್ರಸಾದ ವಿತರಣೆಯ ಬಳಿಕ ಪ್ರಸಾದ ಭೋಜನ ಜರುಗಲಿದೆ. ದಿನವಿಡೀ ಭಜನಾ ಕಾರ್ಯಕ್ರಮ, ರಾತ್ರಿ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ, ಕೆಮ್ಮಿಂಜೆ ಕಾರ್ತಿಕ್ ತಂತ್ರಿ, ಕಿಶೋರ್ ಕುಮಾರ್ ಕೊಡ್ಗಿ, ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸ ಸಂಕೀರ್ತನೆ, ಇಂಚರ ಸುಗಮ ಸಂಗೀತ, ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಗ ಮಾಣಿಕ್ಯ ನಾಟಕ ನಡೆಯಲಿದೆ.

ಮುಸ್ಲಿಂ ಭಕ್ತರಿಂದ ಕೊಡುಗೆ

ದೇವಾಲಯವು ಪುನರುಜ್ಜೀವನಗೊಂಡಂದಿನಿಂದ ದೇವಾಲಯದೊಂದಿಗೆ ಒಡನಾಟವಿರಿಸಿಕೊಂಡಿರುವ ಸ್ಥಳೀಯ ಮುಸ್ಲಿಂ ಸಮುದಾಯದ ಭಕ್ತರು ಹೊರೆಕಾಣಿಕೆ ಮೆರವಣಿಗೆ ಸಾಗಿ ಬರುತ್ತಿದ್ದಂತೆಯೇ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿಯೇ ಸಮರ್ಪಿಸುವ ಮೂಲಕ ಮೇಲ್ಪಂಕ್ತಿ ತೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net