ಪಿ.ಎಸ್.ಬೋಪಯ್ಯ, ಉಷಾ ಚಿನ್ನಪ್ಪಗೆ ಸನ್ಮಾನ

ಪಿ.ಎಸ್.ಬೋಪಯ್ಯ, ಉಷಾ ಚಿನ್ನಪ್ಪಗೆ ಸನ್ಮಾನ
Published on

ಸೋಮವಾರಪೇಟೆ: ವಕೀಲರ ಸಂಘದಲ್ಲಿ ವಕೀಲರ ದಿನವನ್ನು ಮಂಗಳವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಪಿ.ಎಸ್.ಬೋಪಯ್ಯ ಮತ್ತು ಉಷಾಚಿನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಗೋಪಾಲಕೃಷ್ಣ ಮಾತನಾಡಿ, ವಕೀಲ ವೃತ್ತಿ ಪವಿತ್ರವಾದುದು. ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಮೂಲಕ ವೃತ್ತಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎಚ್.ಸಿ.ರೇಖಾ ದಿನದ ಮಹತ್ವದ ಬಗ್ಗೆ ವಿವರಿಸಿದರು. ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠ್ಠಲ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಡಿ.ಎ. ಕೃಷ್ಣಕುಮಾರ್, ಉಪಾಧ್ಯಕ್ಷೆ ಎಚ್.ಆರ್.ಪವಿತ್ರಾ, ಪದ್ಮನಾಭ, ಬಿ.ಜೆ. ದೀಪಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net