ಕಾಲನಲ್ಲಿ ಲೀನವಾದ ‘ಪ್ರಳಯ’

19 AKR 02
Published on

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು, ಭಾನುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಲಗುಂದ ಗ್ರಾಮದ ಮಹಾಂತೇಶಸ್ವಾಮಿ ಹಿರೇಮಠ ಎಂಬುವರಿಗೆ ಸೇರಿದ್ದ ಹೋರಿ, ನೂರಾರು ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ಬಹುಮಾನವಾಗಿ ಪಡೆದಿತ್ತು.

ಹೋರಿ ನಿಧನವಾದ ಸುದ್ದಿ ತಿಳಿದು ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಜನ ಆಗಮಿಸಿ ರಾತ್ರಿಇಡಿ ಹೋರಿ ಶವದ ಎದುರು ಭಜನೆ ಮಾಡಿದರು. ಭಾನುವಾರ 3 ಸಾವಿರಕ್ಕೂ ಹೆಚ್ಚು ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಾನವರಂತೆ ಬಸವಣ್ಣನ ಸ್ವರೂಪಿ ಹೋರಿಗೆ ಅಂತಿಮ ವಿಧಿ ವಿಧಾನಗಳು ನೇರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net