

ಮಾಗಡಿ: ಹಾಲಿನ ಟ್ಯಾಂಕರ್ ಟೈಯರ್ ಸಿಡಿದ ಪರಿಣಾಮ ಹಾಲಿನ ಕ್ಯಾಂಟರ್ ಪಲ್ಟಿ ಹೊಡೆದು ಅಪಾರ ಪ್ರಮಾಣದ ಹಾಲು ಭೂಮಿ ಪಾಲಾಗಿದೆ.
ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ಬಳಿ ಶುಕ್ರವಾರ ಘಟನೆ ನಡೆದಿದೆ, ಮಾಗಡಿ ತಾಲೂಕಿನಿಂದ ಬೆಂಗಳೂರಿಗೆ ಹಾಲನ್ನು ತುಂಬಿಕೊಂಡು ಹೋಗುವಾಗ ವೇಳೆ ಈ ಘಟನೆ ನಡೆದಿದೆ. ಕೆಎಂಎಫ್ ಗೆ ಸೇರಿದ ಕ್ಯಾಂಟರ್ ಇದಾಗಿದ್ದು, ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ ಸಾವಿರಾರು ಲೀಟರ್ ಹಾಲು ರಸ್ತೆಗೆ ಸುರಿದಿದೆ.
ಈ ವೇಳೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ನಾಗರೀಕರು ಕ್ಯಾಂಟರ್ ಪಲ್ಟಿಹೊಡೆಯುತ್ತಿದಂತೆ ಕ್ಯಾಂಟರ್‌ನಲ್ಲಿದ್ದ ಹಾಲನ್ನು ನಾಗರೀಕರು ಬಾಟಲ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಪಘಾತದ ವೇಳೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.