ನೀರ್ಚಾಲು ಶಾಲೆ ಸಮಗ್ರ ಚಾಂಪಿಯನ್

Bdk_Prize
Published on

ಬದಿಯಡ್ಕ: ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಜರುಗಿದ 2024-2025ನೇ ಸಾಲಿನ 63ನೇ ಕುಂಬಳೆ ಉಪಜಿಲ್ಲಾಮಟ್ಟದ ಕಲೋತ್ಸವದ ಕನ್ನಡ ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆ ತನ್ನ ಮುಡಿಗೇರಿಸಿದೆ.

ಈ ಶಾಲೆಯಲ್ಲಿ ಕಲಿಯುತ್ತಿರುವ 2ನೇ ತರಗತಿ ಸ್ವರಾಧ್ಯ ಕನ್ನಡ ವಿಭಾಗದ ಅಭಿನಯ ಗೀತೆಯಲ್ಲಿ ‘ಎ’ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ, ಕಥೆ ಹೇಳುವ ಸ್ಪರ್ಧೆಯಲ್ಲಿ ‘ಎ’ ಗ್ರೇಡ್‌ನೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. 3ನೇ ತರಗತಿ ಅಶ್ವತ್ ಎಂ. ಒಗಟು ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ಗಳಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ, ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net