ಕಚೇರಿಯಲ್ಲೇ ನೇಣಿಗೆ ಶರಣಾದ ಗುತ್ತಿಗೆ ನೌಕರ

IMG-20230324-WA0054
Published on

ಕಾರವಾರ:ಗುತ್ತಿಗೆ ನೌಕರನೊಬ್ಬ ತನ್ನ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ನಗರದ ಪಿಕಳೆ ರಸ್ತೆಯ ಎಸ್‌ಬಿಐ ಪಕ್ಕದ ಕಟ್ಟಡದ ಮೊದಲ ಮಹಡಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ಗುಮಾಸ್ತನಾಗಿದ್ದ ಕೋಡಿಬಾಗ ಕೇಶವನಾಯ್ಕವಾಡ ನಿವಾಸಿ ಸತೀಶ ನಾಯ್ಕ (40) ಮೃತ ವ್ಯಕ್ತಿ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ತನ್ನ ಮಗುವನ್ನು ಶಾಲೆಗೆ ಬಿಟ್ಟು ಕಚೇರಿಗೆ ಬಂದ ಸತೀಶ ನಾಯ್ಕ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. `ಇತ್ತೀಚೆಗೆ ತನ್ನ ವಿರುದ್ಧ ತಳ್ಳಿ ಅರ್ಜಿಗಳು ಬರುತ್ತಿವೆ' ಎಂದು ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಮೃತರಿಗೆ ಇಬ್ಬರು ಪುಟ್ಟ ಮಕ್ಕಳು,ಪತ್ನಿ ಇದ್ದು, ಸ್ಥಳದಲ್ಲಿ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net